ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಖಂಡಿಸಿ ಜಯಕರ್ನಾಟಕ ಹೋರಾಟ

0
54

ಸುರಪುರ: ಹೆಸರಿಗೆ ಸರಕಾರಿ ಆಸ್ಪತ್ರೆಯಿದ್ದು ಇಲ್ಲಿ ಯಾವುದೆ ಸರಿಯಾದ ವ್ಯವಸ್ಥೆಯಿಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರವಿ ಕುಮಾರ ನಾಯಕ ಬೈರಿಮಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ತಾಲ್ಲೂಕು ಆಸ್ಪತ್ರೆ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಆಸ್ಪತ್ರೆಯಲ್ಲಿ ಐಸಿಯು ಘಟಕವಿದ್ದು ಸಿಬ್ಬಂದಿ ಇಲ್ಲದೆ ಇದುವರೆಗೆ ಆರಂಭಿಸಿಲ್ಲ.ಡಯಾಲಿಸಿಸ್ ಘಟಕವಿದ್ದು ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲದೆ ಉಪಯೋಗವಿಲ್ಲದಂತಾಗಿದೆ.ಕುಡಿಯುವ ನೀರಿನ ಸಮಸ್ಯೆ ಇದೆ,ಪ್ರಸೂತಿ ತಜ್ಞರು ಇಲ್ಲದಿರುವುದರಿಂದ ಹೆರಿಗೆಗೆ ತೊಂದರೆಯಾಗಿದೆ,ಸರಿಯಾದ ವೈದ್ಯರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.ಚುಚ್ಚುಮದ್ದು ವಿಭಾಗದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ,ಅಲ್ಲದೆ ಸಿಬ್ಬಂದಿ ಕೊರತೆಯಿಂದಾಗಿ ಮಹಿಳೆಯರು ಮತ್ತು ಪುರುಷರನ್ನು ಒಂದೆಡೆಯಲ್ಲಿಯೆ ಚುಚ್ಚುಮದ್ದು ಹಾಕಾಳಗುತ್ತಿದೆ.ಪ್ರತ್ಯೇಕ ಕೋಣೆಗಳನ್ನು ತೆರೆಯಬೇಕು.ಆಸ್ಪತ್ರೆಯಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆಯಿಲ್ಲದೆ ದುರ್ನಾತ ಬೀರುತ್ತಿದೆ.ಆಸ್ಪತ್ರೆಯ ಮೇಲೆಯೆ ಮೊಬೈಲ್ ಟವರ್ ಹಾಕಿರುವುದರಿಂದ ರೋಗಿಗಳಿಗೆ ಮತ್ತು ಮಕ್ಕಳ ಮೇಲೆ ಗಂಬೀರ ಪರಿಣಾಮ ಬೀರುತ್ತಿದೆ.ಕೂಡಲೆ ಟವರ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಬರೆದ ಮನವಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ,ಶರಣಪ್ಪ ಬೈರಿಮರಡಿ,ರಾಮಕೃಷ್ಣ ಕಲ್ಲೋಡಿ, ಯಲ್ಲಪ್ಪ ನಾಯಕ, ಚಂದ್ರು ನಾಯಕ,ದೇವು ನಾಯಕ,ಯಲ್ಲಪ್ಪ ಕಲ್ಲೋಡಿ,ಬಸವರಾಜ ಕವಡಿಮಟ್ಟಿ,ಬಸವರಾಜ ಪಾಟೀಲ,ಯಲ್ಲಪ್ಪ ಶಿಬಾರಬಂಡಿ,ಮೌನೇಶ ದಳಪತಿ,ರವಿಕಿರಣ ಹೊಸ ಸಿದ್ದಾಪುರ ರಾಘವೇಂದ್ರ ಗೋಗಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here