ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಕಲಬುರಗಿ ವಿಮಾನ ನಿಲ್ದಾಣದ ಪ್ರದೇಶ ಹಸ್ತಾಂತರ

0
92

ಕಲಬುರಗಿ: ರಾಜ್ಯ ಸರ್ಕಾರವೇ ಸಂಪೂರ್ಣವಾಗಿ 175.57 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಹಾರಾಟ ಪ್ರಾರಂಭಿಸುವ ಸಂಬಂಧ ವಿಮಾನ ನಿಲ್ದಾಣದ ಒಟ್ಟು 742-23 ಎಕರೆ ಪ್ರದೇಶವನ್ನು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರು ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಮತ್ತು ಜಂಟಿ ಜನರಲ್ ಮ್ಯಾನೇಜರ್ ಎಂ.ಯಾದಯ್ಯ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿ ಹಂಚಿಕೆ ಪತ್ರ ನೀಡಿದರು.

ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಕೆಐಎಡಿಬಿ ಧಾರವಾಡ ಇವರು 567-10 ಎಕರೆ, ಸಹಾಯಕ ಆಯುಕ್ತರು ಕಲಬುರಗಿ ಇವರು 127-30 ಎಕರೆ ಹಾಗೂ ತಹಶೀಲ್ದಾರರು ಕಲಬುರಗಿ ಇವರು 48-23 ಎಕರೆ ಸೇರಿದಂತೆ ಒಟ್ಟಾರೆ 742-23 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಡುವೆ ನಡೆದ ಪರಸ್ಪರ ಒಪ್ಪಂದದಂತೆ ಇಂದು ವಿಮಾನ ನಿಲ್ದಾಣದ ಅಷ್ಟು ಪ್ರದೇಶವನ್ನು ಭೌತಿಕ ಹಂಚಿಕೆ ಪ್ರಕ್ರಿಯೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿರುವುದರಿಂದ ಕೂಡಲೆ ವಾಣಿಜ್ಯ ಹಾರಾಟ ಪ್ರಾರಂಭಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಶ್ವರ ರಾವ್ ಅವರಿಗೆ ತಿಳಿಸಿದ ಅವರು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣಪ್ಪ, ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಕಲಬುರಗಿ ತಹಶೀಲ್ದಾರ ಸಂಜೀವಕುಮಾರ ದಾಸರ್, ಶಿರಸ್ತೇದಾರ ಗಂಗಾಧರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here