ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಉದ್ಘಾಟನೆ

0
23

ಸುರಪುರ: ರಾಜ್ಯ ಸರಕಾರದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಬದುಕು ನಾಶ ಮಾಡಲು ಮುಂದಾಗಿದ್ದಾರೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ವೇಳಸಿಂಗಿ ಮಾತನಾಡಿದರು.

ನಗರದ ರಂಗಂಪೇಟೆಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಂಗಂಪೇಟೆ ನಗರ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸಂತೊಷ ಲಾಡ್ ಅವರು ಎಲ್ಲಾ ಹಣವನ್ನು ತಮ್ಮ ಸರಕಾರಕ್ಕೆ ಬಳಕೆ ಮಾಡಿಕೊಂಡು ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಕಾಮಗಾರಿಯ ಪರವಾನಿಗೆ ಪ್ರತಿ ನೀಡಬೇಕು ಎನ್ನುವ ಇಲ್ಲದ ನಿಯಮಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆ.ಎಷ್ಟೋ ಮಾಲೀಕರು ಕಟ್ಟಡ ಕಟ್ಟಲು ಪರವಾನಿಗೆಯನ್ನೇ ತೆಗೆದುಕೊಳ್ಳುವುದಿಲ್ಲ,ಆದರೆ ಕಾರ್ಮಿಕರ ನೊಂದಣಿಗೆ ಹಾಗೂ ಕಾರ್ಡ್‍ಗಳ ನವೀಕರಣಕ್ಕೆ ಕಟ್ಟಡ ಪರವಾನಿಗೆ ಬೇಕು ಎಂದು ವಿಳಂಬ ಮಾಡಿ ತೊಂದರೆ ಮಾಡುತ್ತಾರೆ.

Contact Your\'s Advertisement; 9902492681

ಕಾರ್ಮಿಟಕರ ಮಕ್ಕಳಿಗೆ ಲ್ಯಾಪ್‍ಟಾಪ್ ಕೊಡುವಲ್ಲಿ ಲ್ಯಾಪಟಾಪ್ ಖರಿದಿಯಲ್ಲಿ ಸರಕಾರ ಭ್ರಷ್ಟಾಚಾರ ನಡೆಸಿದೆ,ಕಾರ್ಮಿಕರ ಮಕ್ಕಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನದ ಹಣದಲ್ಲಿ ಕಡಿತಗೊಳಿಸಿ ಕೇಳಿದರೆ ಶಾಲಾ ಕಾಲೇಜುಗಳ ಹೆಸರು ದಾಖಲೆಗೆ ಶುಲ್ಕ ಕಡಿಮೆಗೊಳಿಸಲಾಗಿದೆ ಎಂದು ಕಾರಣ ಹೇಳುತ್ತಾರೆ.ಇಂತಹ ಅನೇಕ ಕಾರಣಗಳನ್ನು ವಿರೋಧಿಸಿ ನಮ್ಮ ಎಐಟಿಯುಸಿ ವತಿಯಿಂದ ಮುಂದಿನ ತಿಂಗಳು ಬೃಹತ್ ಪ್ರತಿಭಟನೆ ನಡೆಸಲಿದ್ದು ಆಗ ತಾವೆಲ್ಲರು ಭಾಗವಹಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ,ಅಕ್ಷರ ದಾಸೋಹ ಜಿಲ್ಲಾಧ್ಯಕ್ಷ ಕಲ್ಪನಾ ಗುರಸುಣಗಿ,ಎಐಟಿಯುಸಿ ಜಿಲ್ಲಾ ಪ್ರ.ಕಾರ್ಯದರ್ಶಿ ತಿಮ್ಮಯ್ಯ ತಳವಾರ,ಮುಖಂಡರಾದ ಅಬ್ದುಲ್‍ಗಫೂರ ನಗನೂರಿ,ಅಬ್ದುಲ್ ಅಲೀಂ ಗೋಗಿ,ಎನ್‍ಎಫ್‍ಐಯುಸಿ ಪದ್ಮಾ ಪಾಟೀಲ್ ಕಲಬುರ್ಗಿ,ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಶಿವಲಿಂಗಮ್ಮ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘದ ರಂಗಂಪೇಟ ನಗರ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಗುರುತಿನ ಚೀಟಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ರಮೇಶ ಡೊಳ್ಳೆ,ನಾಗಪ್ಪ ಕಟ್ಟಿಮನಿ,ವಾಸುದೇವ ಮಂಗಳೂರ,ನಾಸಿರ್ ಕುಂಡಾಲೆ, ಅಕ್ಷರ ದಾಸೋಹ ಜಿಲ್ಲಾ ಪ್ರ.ಕಾರ್ಯದರ್ಶಿ ಶ್ರೀದೇವಿ ಹುಣಸಗಿ,ಎಐಟಿಯುಸಿ ತಾ.ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ,ತಾ.ಗೌರವಾಧ್ಯಕ್ಷ ತಿಮ್ಮಯ್ಯ ದೊರೆ,ಮರೆಪ್ಪ ದೇಸಾಯಿ,ಮಹಿಬೂಬ ರುಕ್ಮಾಪುರ ವೇದಿಕೆ ಮೇಲಿದ್ದರು.

ನಗರ ಘಟಕದ ಪದಾಧಿಕಾರಿಗಳು: ಬಾಲಪ್ಪ ಗೌರವಾಧ್ಯಕ್ಷ, ಅಯ್ಯಪ್ಪ ವಗ್ಗಾಲಿ ಅಧ್ಯಕ್ಷ,ಮಲ್ಲಪ್ಪ,ಹಣಮಂತ ಉಪಾಧ್ಯಕ್ಷರು,ಶರಣಬಸಪ್ಪ ಪೂಜಾರಿ ಪ್ರ.ಕಾರ್ಯದರ್ಶಿ,ದ್ಯಾಮಗೌಡ ಖಜಾಂಚಿ,ಮಲ್ಲಪ್ಪ ಉಪ ಖಜಾಂಚಿ, ಅಮೀತ್,ವಿಶ್ವನಾಥ,ಜಿಲಾನಿ,ಮಹ್ಮದ್ ಖಾಸಿಂ,ಚಂದಪ್ಪ,ನಾಗರಾಜ,ಅಲೀಮ್,ಮರೆಪ್ಪ ಸಂಘಟನಾ ಕಾರ್ಯದರ್ಶಿಗಳು,ಮೊಹ್ಮದ್ ಯೂಸುಫ್,ಸಿದ್ದರಾಜ,ರಫೀಕ್,ಮಹೇಬೂಬ್ ಹಾಗೂ ತಿಮ್ಮಣ್ಣ ಇವರನ್ನು ಸಹ ಕಾರ್ಯದರ್ಶಿಗಳನ್ನಾಗಿ ನೇಮಕಗೊಳಿಸಲಾಯಿತು.

ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡ ಕಾರ್ಮಿಕ ವಿರೋಧಿ ಪಕ್ಷಗಳೆ,ಕಾಂಗ್ರೆಸ್‍ನವರು ಕಳ್ಳರು,ಬಿಜೆಪಿಯವರು ಕೊಲೆಗಡುಕರು ನಾವು ಯಾರನ್ನು ಬೆಂಬಲಿಸಬೇಕು ಎನ್ನುವುದನ್ನು ತುಂಬಾ ಯೋಚಿಸಬೇಕು. – ಪ್ರಭುದೇವ ವೇಳಸಿಂಗಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here