ಮಾತೋಶ್ರೀ ಅವ್ವಾಜೀಗೆ ನಾಲ್ಕುಚಕ್ರ, ಛಪ್ಪರಬಂದಿ ಫ಼ೌಂಡೇಶನ ವತಿಯಿಂದ ಅಭಿನಂದನಾ ಸಮಾರಂಭ

0
98

ಕಲಬುರಗಿ: ನಗರದ ಗೋದುತಾಯಿ ಮಹಿಳಾ ಮಹಾವಿದ್ಯಾಲಯದಲ್ಲಿ ನಾಲ್ಕುಚಕ್ರ ಚಾರಿಟೇಬಲ್ ಟ್ರಸ್ಟ್ ಕಲಬುರಗಿ ಛಪ್ಪರಬಂದಿ ಪ್ರಭಾಕರ್ ಫ಼ೌಂಡೇಶನ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಶರಣಬಸಪ್ಪ ಅಪ್ಪ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರಿಗೆ ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಅವ್ವಾಜೀ ಅವರು ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲಿ ಉತ್ತುಂಗ ಸಾಧನೆಯಲ್ಲಿದ್ದಾರೆ ನನಗೆ ಬಂದಿರುವ ಪ್ರಶಸ್ತಿ ಎಲ್ಲಾ ಮಹಿಳೆಯರಿಗೆ ಅರ್ಪಿಸಲು ಬಯಸುತ್ತೆನೆ‌ ನಿಮ್ಮೆಲ್ಲರ ಸಂತೋಷ ನೋಡಿ ನನಗೂ ಖುಷಿ ಇಮ್ಮಡಿಗೊಂಡಿದೆ. ತೊಟ್ಟಿಲು ತೂಗುವ ಕೈಗಳು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಇಂದಿನ ನಾರಿಶಕ್ತಿ ಪ್ರಶಸ್ತಿ ಸ್ವೀಕರಿಸಿರುವ ಸಾಧಕಿಯರೆ ಉದಾಹರಣೆ.. ಎಲ್ಲಾ ರಂಗದಲ್ಲಿ ಸಾಧಕಿಯರಿಗೆ ಪ್ರಶಸ್ತಿ ನೀಡಿರುವುದು ಶ್ಲಾಘನೀಯ.. ಛಪ್ಪರಬಂದಿ ಪ್ರಭಾಕರ ಫ಼ೌಂಡೇಶನ್ ಹಾಗೂ ನಾಲ್ಕುಚಕ್ರ ತಂಡದ ಸಾಮಾಜಿಕ ಕಾರ್ಯಗಳು ಮೆಚ್ಚುವಂತದ್ದು ಇದೇ ರೀತಿ ಮುಂದುವರೆಸಿಕೊಂಡು ಹೋಗಿ ಎಂದು ಅವ್ವಾಜೀ ಶುಭ ಹಾರೈಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟಕರಾಗಿ ಭಾರತಿ ರೇಷ್ಮೆ ಅವರು ಮಾತನಾಡಿ ಅವ್ವಾಜೀ ಅವರು ಮಾತೃಹೃದಯಿ ಎಲ್ಲರನ್ನೂ ಮಕ್ಕಳಂತೆ ಪ್ರೀತಿಸುವ ಅವರ ಗುಣ ಅನುಕರಣೀಯ. ಅವ್ವಾಜೀ ಅವರ ಸೇವೆ ಹಾಗೂ ಸಾಧನೆಯನ್ನು ಗಿರುತಿಸಿ ಮುಂದಿನ ದಿನಗಳಲ್ಲಿ ಗೌರವಯುತವಾದ ಪದ್ಮ ವಿಭೂಷಣ ಪ್ರಶಸ್ತಿ ಒದಗಿ ಬರಲಿ ಎಂದು ಹಾರೈಸೊಣ. ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಆಯೋಜಕರಿಗೆ ಅಭಿನಂದನೆಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ ಭಾಗ್ಯಶ್ರೀ ಪಾಟೀಲ್ ಊಡಗಿ ಮಾತನಾಡಿ ಅವ್ವಾಜೀ ಆಲದಮರ ಇದ್ದಂತೆ ಅಲ್ಲಿ ಎಲ್ಲರಿಗೂ ನೆರಳು ಸಿಗುತ್ತೆ ಇಂತಹ ಮಹಾತಾಯಿಯ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗೋಣ ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಅವರ ಮುಡಿಗೆರಲಿ ಎಂದು ಹೇಳಿದರು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಶಶಿಕಲಾ ಟೆಂಗಳಿ ಅವರು ಮಾತನಾಡಿ, ಅವ್ವಾಜೀ ಅವರಿಗೆ ಸಂದ ಪ್ರಶಸ್ತಿ ನಮ್ಗೆಲ್ಲ ಅತೀವ ಸಂತೋಷ ತಂದಿದೆ ಅವ್ವಾಜೀ ಅವರು ಸ್ತ್ರೀ ಕುಲಕ್ಕೆ ಮಾದರಿ. ಇಂದು ಮಹಿಳೆಯರು ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪನ್ನು‌ ಮೂಡಿಸುತ್ತಿರುವುದಕ್ಕೆ ನಮ್ಮ ಕಲಬುರಗಿಯ ಕುವರಿ ಮಹಿಳಾ ಐಪಿಎಲ್ ನಲ್ಲಿ ಟ್ರೋಫ಼ಿ ತಂದು ಕೊಟ್ಟಿರುವುದು ಇದಕ್ಕೆ ತಾಜಾ ಉದಾಹರಣೆ. ನಾಲ್ಕುಚಕ್ರ ಕೂಡ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಸಮಾಜದಲ್ಲಿ ಬದಲಾವಣೆ ತರುತ್ತಿರುವುದು ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ ನೀಲಾಂಬಿಕಾ ಶೇರಿಕಾರ್ ಅವರು ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಮಹಾತಾಯಿಗೆ ಬಂದಿರುವ ಪ್ರಶಸ್ತಿಯ ಸಂತಸವನ್ನು ಎಲ್ಲರೂ ಇಷ್ಟೊಂದು ವಿಜೃಂಭಣೆಯಿಂದ ಆಚರಿಸುವುದು ನಿಜಕ್ಕೂ ಖುಷಿ ಪಡುಡುವಂತದ್ದು. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಇಂದಿನ ಸಮಾಜದ ಕಣ್ಣಾಗಿ ಹೆಣ್ಣು ಮುನ್ನುಗುತ್ತಿರುವುದು ಶ್ಲಾಘನೀಯ. ನಮ್ಮ ಸಂಸ್ಥೆಯ ಪರವಾಗಿ ನಾಲ್ಕುಚಕ್ರ ಹಾಗೂ ಛಪ್ಪರಬಂದಿ ಫೌಂಡೇಶನ್ ಅವರಿಗೆ ಧನ್ಯವಾದಗಳು ತಿಳಿಸುತ್ತೆವೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದ ನಾಲ್ಕುಚಕ್ರ ಮುಖ್ಯಸ್ಥೆ ಮಾಲಾ ಕಣ್ಣಿ ಅವರು ಸ್ತ್ರೀ ಸಬಲಿಕರಣಕ್ಕೆ ಒತ್ತು ನೀಡಿ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಇವರ ಈ ಗುಣ ಎಲ್ಲರೂ‌ ಮೆಚ್ಚುವಂತದ್ದು. ತಾಯಿ ಸ್ವರೂಪಿಯಂತೆ ಇರುವ ಅವ್ವಾಜೀ ಎಲ್ಲರಿಗೂ ಪ್ರೀತಿಪಾತ್ರರು. ಕೇವಲ ಶಿಕ್ಷಣ ಸಂಸ್ಥೆಯಲ್ಲಿ‌ ಮಾತ್ರವಲ್ಲದೇ ಯಾವಗಲೂ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವ್ವಾಜೀ ಅವರು ನಮಗೆಲ್ಲ ಮಾದರಿ. ಅವ್ವಾಜೀ ಅವರಿಗೆ ಗೌರವ ಡಾಕ್ಟರೇಟ್ ಪ್ರಸಸ್ತಿ ನೀಡಿದ್ದರಿಂದ ಪ್ರಶಸ್ತಿಯ ಬೆಲೆ ಹೆಚ್ಚಾಗಿದೆ ಹಾಗೂ ಎಲ್ಲ ಮಹಿಳಾ ಮಣಿಗಳಿಗೆ ಈ‌ ಪ್ರಶಸ್ತಿ ಸಂದಷ್ಟೆ ಖುಷಿಯಾಗಿದೆ.. ನಿಮ್ಮ ಮಾರ್ಗದರ್ಶನ ಆಶಿರ್ವಾದ ಸದಾ ನಮ್ಮ‌ ಮೇಲಿರಲಿ ತಂಡದ ವತಿಯಿಂದ ಅವ್ವಾಜೀ ಅವರಿಗೆ ಅಭಿಮಾನದ ಭಕ್ತಿಪೂರ್ವಕ ಅಭಿನಂದನೆಗಳು ಹಾಗೂ ಗೌರವ ನಮನಗಳನ್ನು ತಿಳಿಸಿದರು..

ಇದೇ ಸಂದರ್ಭದಲ್ಲಿ ಶೃತಿ ವೆಂಕಟೇಶಲು ವೈದ್ಯಕೀಯ ಕ್ಷೇತ್ರ, ಡಾ ಪುಟ್ಟಮಣಿ ದೇವಿದಾಸ್ ಸಾಹಿತ್ಯ ಕ್ಷೇತ್ರ, ಡಾ ಗೀತಾ ಪಾಟೀಲ್ ಶಿಕ್ಷಣ ಕ್ಷೇತ್ರ, ಭಾರತಿ ಪಾಟೀಲ್ ಸಮಾಜ ಸೇವೆ, ಶಿತಲ್ ಗಿಲ್ಡಾ ಉದ್ಯಮ ಕ್ಷೇತ್ರ, ಮಹಾನಂದಾ ಪಾಟೀಲ್ ಕೃಷಿ ಕ್ಷೇತ್ರ, ಆರ್ ಜಿ ನಾಗೇಶ್ವರಿ ಕದಮ್ ಮಾಧ್ಯಮ ಕ್ಷೇತ್ರ, ಭವಾನಿ ಕಡ್ಲೂರು ವಿಡಿಯೋ ಕ್ರೀಯೆಟರ್ ಈ ಎಲ್ಲಾ ಕ್ಶೇತ್ರದ ಸಾಧಕಿಯರಿಗೆ ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಭಾಷಣ ಶರಣರಾಜ್ ಛಪ್ಪರಬಂದಿ, ನಿರೂಪಣೆ ಆರ್ ಜೆ ನಾಗೇಶ್ವರಿ ಕದಮ್ ಹಾಗೂ ವಂದನಾರ್ಪಣೆ ಕಲ್ಯಾಣರಾವ್ ಪಾಟೀಲ್ ಕಣ್ಣಿ ಮಾಡಿದರು..

ಈ ಸಂದರ್ಭದಲ್ಲಿ ಜಾನಕಿ ಹೊಸುರಕರ್ ಪ್ರಾಂಶುಪಾಲರು ಗೋದುತಾಯಿ ಮಹಿಳಾ ಮಹಾವಿದ್ಯಾಲಯ, ಬಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಕಲ್ಪನಾ ಭಿಮಳ್ಳಿ, ಛಪ್ಪರಬಂದಿ ಪ್ರಭಾಕರ ಫ಼ೌಂಡೇಶನ್ ಅಧ್ಯಕ್ಷರಾದ ಸುವರ್ಣಾ ಛಪ್ಪರಬಂದಿ, ನಾಲ್ಕುಚಕ್ರ ಮುಖ್ಯಸ್ಥರಾದ ಕಲ್ಯಾಣರಾವ ಪಾಟೀಲ ಕಣ್ಣಿ, ಮಹೇಶಚಂದ್ರ ಪಾಟೀಲ ಕಣ್ಣಿ, ಸದಸ್ಯರುಗಳಾದ ವಿಜಯಲಕ್ಷ್ಮಿ ಹಿರೇಮಠ, ರಾಹುಲ್ ರಾಥೋಡ್,ಅನಂದತೀರ್ಥ ಜೋಶಿ, ಪೂರ್ಣಿಮಾ ಕುಲಕರ್ಣಿ, ಜಯಶ್ರೀ ಜೈನ,ಲಿಂಗರಾಜ ಡಾ0ಗೆ, ಸುಭಾಷ್ ಮೈತ್ರೆ, ಅನ್ನಪೂರ್ಣ ಸಂಗೊಳಗಿ, ಸುಧಾರಾಣಿ, ನಿರ್ಮಲ ಮುತ್ತಿನ, ಸುಮಂಗಲ ಚಕ್ರವರ್ತಿ, ಶೀಲಾ, ವಿಶ್ವನಾಥ ಗೌನಳ್ಳಿ, ಕಲ್ಯಾಣರಾವ ಶೀಲವಂತ, ಪ್ರಭುಲಿಂಗ ಮೂಲಗೆ, ಮಲ್ಲಿಕಾರ್ಜುನ್ ಡೊಣ್ಣೂರ, ಶಿವ ಜೀ ಕೃಷ್ಣ, ಸಿದ್ಧಲಿಂಗಪ್ಪ ಮಲಶೆಟ್ಟೆ, ಬಸವಂತರಾಯ ಕೊಳಕುರ, ಶಿವಾನಂದ ಮಠಪತಿ ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು, ಹಾಗೂ ವಿದಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here