ಈಡಿಗ ನಿಗಮ ಅನುದಾನಕ್ಕೆ ವಿಧಾನಸಭೆಯಲ್ಲಿ ಧ್ವನಿಯಾಗುವೆ: ಶಾಸಕ ಗವಿಯಪ್ಪ

0
8

ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಒದಗಿಸಲು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುವುದಲ್ಲದೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದು ಧ್ವನಿಯಾಗುವೆ ಎಂದು ವಿಜಯನಗರ ಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಎಚ್. ಆರ್ ಗವಿಯಪ್ಪ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಎಚ್ ಆರ್ ಗವಿಯಪ್ಪ ಅವರು ಮಂಗಳವಾರ (ಜುಲೈ ಎರಡರಂದು) ಕಲ್ಬುರ್ಗಿ ಜಿಲ್ಲೆ ಈಡಿಗ- ಬಿಲ್ಲವ ನಾಯಕರ ಸಭೆಯಲ್ಲಿ ಮಾತನಾಡಿ ಶೀಘ್ರದಲ್ಲೇ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಸಮುದಾಯದ ಹಿತ ದೃಷ್ಟಿಯಿಂದ ನಿಗಮಕ್ಕೆ ಅನುದಾನ ಹಾಗೂ ನಿರ್ದೇಶಕರನ್ನು ನೇಮಕ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

Contact Your\'s Advertisement; 9902492681

ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ವಿ ಗುತ್ತೇದಾರ್ ಎಚ್. ಆರ್ ಶ್ರೀನಾಥ್ ಜಗದೇವ ಗುತ್ತೇದಾರ್ ಕಾಳಗಿ, ಮಂಗಳೂರಿನ ಪದ್ಮರಾಜ್ ಆರ್ ಮುಂತಾದ ನಾಯಕರ ಸಲಹೆ ಮಾರ್ಗದರ್ಶನದೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಚರ್ಚಿಸುವುದಲ್ಲದೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಸಮಾಜದ ಬಡಬಗ್ಗರ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನಿಗಮದ ಮೂಲಕ ನೆರವಾಗಲು ಸರಕಾರವು ಕೂಡಲೇ ಅನುದಾನ ಮಂಜೂರು ಮಾಡಬೇಕು ಈ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಿಂದ ಇದಕ್ಕೆ ಭರವಸೆ ಪಡೆಯಲಾಗುವುದು ಎಂದು ಗವಿಯಪ್ಪ ಹೇಳಿದರು.

ಎಲ್ಲ ಜಿಲ್ಲೆಗಳ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳು ಒಟ್ಟಾಗಿ ಸಮುದಾಯದ ಅಭಿವೃದ್ಧಿ ಸಾಧಿಸಲು ಮುಂದಿನ ದಿನಗಳಲ್ಲಿ ಸಮಾಜ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲು ಪ್ರಯತ್ನಿಸಲಾಗುವುದು ಎಚ್ . ಜಿ.ರಾಮಲು, ಎಸ್. ಬಂಗಾರಪ್ಪ, ಜನಾರ್ಧನ ಪೂಜಾರಿ, ಎಸ್ ಆರ್ ಜಾಲಪ್ಪರಂತಹ ನಾಯಕರ ಆದರ್ಶ ಈ ಸಮಾಜಕ್ಕೆ ಇರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಜಯನಗರ ಕ್ಷೇತ್ರದ ಶಾಸಕರಾಗಿ ಆಯ್ಕೆ ಹೊಂದಿದ ನಂತರ ಮೊದಲ ಬಾರಿಗೆ ಕಲ್ಬುರ್ಗಿಗೆ ಆಗಮಿಸಿದ ಎಚ್. ಆರ್ . ಗವಿಯಪ್ಪ ಅವರಿಗೆ ಕಲ್ಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ ಕಡೇಚೂರ್ ಶಾಲು ಮತ್ತು ಹಾರ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ತಿಮ್ಮಪ್ಪ ಗಂಗಾವತಿ, ಸುರೇಶ್ ಗುತ್ತೇದಾರ್ ಮಟ್ಟೂರ್, ಸಾಯಿ ಗುತ್ತೇದಾರ್ ಗಂಗಾವತಿ, ಡಾ. ಸದಾನಂದ ಪೆರ್ಲ, ಹರ್ಷ ಗಂಗಾವತಿ ರಾಜೇಶ್ ಡಿ. ಗುತ್ತೇದಾರ, ಪ್ರವೀಣ್ ಜತ್ತನ್, ಸಂತೋಷ್ ಚೌಧರಿ ಅಭಿಷೇಕ್ ಗುತ್ತೇದಾರ್ ಮತ್ತು ಅಶೋಕ ಸಂಕಲಾಪುರ ನಿಂಗಯ್ಯ ಈಳಿಗೆರ್ ಯಾದಗಿರಿ ಹಾಗೂ ಅಂಜಿನಪ್ಪ ಗಂಗಾವತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here