ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

0
8

ಕಲಬುರಗಿ: ಭಾರತ ಸಂವಿಧಾನ ಆತಂಕದಲ್ಲಿದ್ದು, ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಷ್ಟ್ರೀಯ ಸಮಾಜದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಹೇಳಿದರು.

ನಗರದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ರವರ 133 ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರ, ರೈತರ ಹಾಗೂ ಕಾರ್ಮಿಕರ ಪರ ಇದ್ದ ಒಂದೊಂದೇ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಈ ದೇಶದ ಬಹುಜನರ ಬದುಕಿಗೆ ಕೊಳ್ಳಿ ಇಡುತ್ತಿದೆ. ಪ್ರತಿ ವರ್ಷ ನಿರುದ್ಯೋಗಿ ಯುವಕರಿಗೆ ಎರಡು ಕೋಟಿ ನೌಕರಿ ಕೊಡುವಾದಾಗಿ ಹೇಳಿದ್ದರು ಆದರೆ ಇಲ್ಲಿಯವರೆಗೆ ಯಾವುದೆ ನೌಕರಿ ಕೊಟ್ಟಿರುವದಿಲ್ಲ. ರೈತರ ಆದಾಯ ದ್ವಿಗುಣ ಮಾಡುವಾದಾಗಿ ಹೇಳಿದ್ದರು ಆದರೆ ಇಲ್ಲಿಯವರೆಗೆ ಮಾಡಿರುವದಿಲ್ಲ.ಆದರೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಮತ -ಧರ್ಮಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಮಗೆ ನ್ಯಾಯಯುತವಾಗಿ ದೊರಕಬೇಕಾದ ತೆರಿಗೆ ಹಣ ಕೊಡುತ್ತಿಲ್ಲ, ಬರ ಪರಿಹಾರ ನೀಡುತ್ತಿಲ್ಲ, ನೆರೆ ಬಂದರೂ ಇತ್ತ ಸುಳಿಯುವುದಿಲ್ಲ. ಬರೀ ಸುಳ್ಳು ಭಾಷಣ ಹೇಳುವ ಮೂಲಕ ಜನರಿಗೆ ಬಿ. ಜೆ. ಪಿ ಸರ್ಕಾರ ಮಂಕು ಬೂದಿ ಎರಚುತ್ತಿದೆ. ಹಾಗಾಗಿ, ನಿಜವಾಗಿಯೂ ಈ ದೇಶದ ಮೇಲೆ ಪ್ರೀತಿ ಇರುವವರು ಮಾನವೀಯತೆ ಮತ್ತು ಅಂತಃಕರಣವಿರುವ ಎಲ್ಲಾ ಮನಸ್ಸುಗಳು ಹಾಗೂ ಸಂಘಟನೆಗಳು ಒಂದಾಗಿ ನಾಳೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಭ್ರಷ್ಟ ಬಿಜೆಪಿ ಪಕ್ಷದ ಸರ್ಕಾರ ಬದಲಾವಣೆ ಮಾಡಬೇಕೆಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಕ್ಯಾಶ್ಬಳ್ಳಿ ಹಾಗೂ ಕಾರ್ಯದರ್ಶಿ ಶ್ರೀಮಂತ ಮಾವನೂರ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ದೊಡ್ಮನಿ. ರಾಜ್ಯ ಘಟಕದ ಉಸ್ತುವಾರಿ ಸುನಿಲ್ ಕಿನ್ನೂರ್, ರಾಜ್ಯ ಕಾರ್ಯದರ್ಶಿ ಬಸವರಾಜ ಎಂ. ರಾವುರ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here