ಶಹಾಬಾದ: ಅಮಾಯಕ ಹೆಣ್ಣು ಮಗಳು ನೇಹಾಳನ್ನು ಬರ್ಬರವಾಗಿ ಹತ್ಯೆಗೈದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಘಟನೆಯು ಮರುಕಳಿಸದೆ ಇರಲು ಮತ್ತು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದ್ದಾರೆ.
ಅವರು ಬುಧವಾರ ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಸಮಾವೇಶವನ್ನೂದ್ದೇಶಿಸಿ ಮಾತನಾಡಿದರು.
ನೇಹಾ ಹತ್ಯೆಯ ಮರಣೋತ್ತರ ಪರೀಕ್ಷೆ ಕೈ ಸೇರಿದ್ದು ಆಕೆಯನ್ನು 14 ಬಾರಿ ಚಾಕುವಿನಿಂದ ಅಮಾನುಷವಾಗಿ ತಿವಿದು ಕೇವಲ 58 ಸೆಕೆಂಡುಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಲಾಗಿದೆ. ಈ ಬರ್ಬರ ಸಾವು ನಾಡಿನ ಜನತೆಯನ್ನು ತಲ್ಲಣ ಗೊಳಿಸಿದೆ. ಮಾತ್ರವಲ್ಲ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ ಹೀನ ಕೃತ್ಯವಾಗಿದೆ. ಇಂತಹ ಹೇಯ ಕೃತ್ಯಗಳು ನಡೆಯದೆ ಇರಲು ಮತ್ತು ಹೆಣ್ಣು ಮಕ್ಕಳು ಸುರಕ್ಷಿತ ಬದುಕು ಸಾಗಿಸಲು ಬಿಜೆಪಿ ಆಡಳಿತವೇ ದೇಶಕ್ಕೆ ಬೇಕಾಗಿದೆ. ಕಾಂಗ್ರೆಸ್ ಆಡಳಿತವು ಈ ಹತ್ಯೆಯನ್ನು ಕ್ಷುಲ್ಲಕವಾಗಿ ಪರಿಗಣಿಸಿ ವೈಯಕ್ತಿಕ ವಿಚಾರವೆಂದು ಏಕಾಏಕಿ ಹೇಳಿಕೆ ನೀಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿತ್ತು.ನಾಡಿನ ಜನತೆ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದಾಗ ತನಿಖೆಗೆ ಮುಂದಾಯಿತು.
ಆನಂತರವμÉ್ಟೀ ಸಿಐಡಿ ತನಿಖೆಗೆ ಒಪ್ಪಿಸಿತು. ಕಾಂಗ್ರೆಸ್ ಸರಕಾರವು ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದಿಲ್ಲ ಮತ್ತು ತುಷ್ಟೀಕರಣ ನೀತಿಯಿಂದ ತನಿಖೆಗೂ ಹಿಂದೆ ಮುಂದೆ ನೋಡಿತು ಎಂದು ಆಪಾದಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಹುದ್ದೆಗೆ ನೇಮಿಸಿ ಗೌರವಾನ್ವಿತ ದ್ರೌಪದಿ ಮುರ್ಮು ಆ ಹುದ್ದೆಯನ್ನು ಅಲಂಕರಿಸಿದರು. ನಿರ್ಮಲಾ ಸೀತಾರಾಮನ್ ಅವರಿಗೆ ಬಹಳ ಮಹತ್ವವಾದ ವಿದೇಶಾಂಗ ಮತ್ತು ಹಣಕಾಸು ಖಾತೆಯನ್ನು ನೀಡಿದರು. ಕೇಂದ್ರ ಆರೋಗ್ಯ ಖಾತೆಯನ್ನು ಮಹಿಳೆಯರಿಗೆ ನೀಡಿದರು.ಈ ಚುನಾವಣೆ ಬಹಳ ಮಹತ್ವದ ಚುನಾವಣೆಯಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ದೇಶದ ಭವಿಷ್ಯವನ್ನು ಬದಲಾಯಿಸಬಲ್ಲ ಪ್ರಬಲ ಶಕ್ತಿಯನ್ನು ಹೊಂದಿದ್ದಾರೆ.ಮುಂದಿನ ಪೀಳಿಗೆಗೆ ಸುರಕ್ಷಿತ ಜೀವನ ನಡೆಸುವ ಚುನಾವಣೆಯಾಗಿರುವುದರಿಂದ ಮೇ ಏಳರಂದು ಶೇಕಡ ನೂರರಷ್ಟು ಮತ ಚಲಾಯಿಸಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿಸಬೇಕು ಮತ್ತು ಎರಡನೇ ಬಾರಿಗೆ ಕಲಬುರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ,ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಮಹಿಳೆಯರಿಗೆ ಮೀಸಲಾತಿ ನೀಡಲು ನೂತನ ಪಾರ್ಲಿಮೆಂಟಿನ ಮೊದಲ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಅಂಗೀಕರಿಸಿತು, ಶೇಕಡ 33 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಮೋದಿಯವರು ಐತಿಹಾಸಿಕ ನಿರ್ಧಾರ ಕೈಗೊಂಡರು.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ.ದೇಶದ ಭವಿಷ್ಯಕ್ಕಾಗಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ನೇಹಾ ಹಿರೇಮಠ ಅವಳ ಸಾವು ಅತ್ಯಂತ ಖಂಡನೀಯ.ಇಂತಹ ಘಟನೆಗಳು ಎಂದಿಗೂ ನಡೆಯಕೂಡದು.ಆದರೆ ಕಾಂಗ್ರೆಸ್ ಸರಕಾರ ಮಹಿಳೆಯ ಸಾವಿನ ಕುರಿತು ತನಿಖೆ ನಡೆಸದೇ, ತುಘಲಕ್ ಆಡಳಿತ ನಡೆಸುತ್ತಿದೆ.ಮಹಿಳೆಯರಿಗೆ ರಕ್ಷಣೆ ಕೊಡದ ಇಂತಹ ಸರಕಾರ ರಾಜ್ಯದಲ್ಲಿ ಬೇಕಾ? ಒಳ್ಳೆಯ ಅವಕಾಶ ಮೇ 7ರಂದು ಒದಗಿ ಬಂದಿದ್ದು, ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿಯವರ ಕೈ ಬಲಪಡಿಸಿದರೇ ಮಹಿಳೆಯರ ರಕ್ಷಣೆ, ದೇಶದ ರಕ್ಷಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜಯಶ್ರೀ ಮತ್ತಿಮಡು,ಶಶಿಕಲಾ ಟೆಂಗಳಿ,ಲಲಿತಾ ಅನ್ನಪೂರ,ಪಾರ್ವತಿ ಪವಾರ,ಜ್ಯೋತಿ.ಸಿ.ಗುರುನಾಥ,ಜೆಡಿಎಸ್ ಅಧ್ಯಕ್ಷ ಅಬ್ದುಲ್ ಗನಿ ಸಾಬೀರ್, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್,ರವಿ ರಾಠೋಡ, ಜಗದೇವ ಸುಬೇದಾರ ಇತರರು ಇದ್ದರು.
ಭಾಗೀರಥಿ ಗುನ್ನಾಪೂರ ಪ್ರಸ್ತಾವಿಕ ಮಾತನಾಡಿದರು,ಸುಜ್ಞಾನಿ ಪೋದ್ದಾರ ನಿರೂಪಿಸಿದರು,ಜಯಶ್ರೀ ಸೂಡಿ ಸ್ವಾಗತಿಸಿದರು, ಲತಾ ಸಂಜೀವ ವಂದಿಸಿದರು.