ದಿಕ್ಕಿಲ್ಲದ ಜಿಲ್ಲಾ ವಾಲ್ಮೀಕಿ ಭವನ: ಒಡೆದ ಕಿಟಕಿ, ಬಾಗಿಲುಗಳು: ಹಂದಿ, ನಾಯಿಗಳ ವಾಸಸ್ಥಾನ!

0
89
  • ಪ್ರಶಾಂತ ಮರೆಮ್ಮನವರ

ಹಾವೇರಿ: ಹಿಂದುಳಿದ ಸಮಾಜಗಳ ಅಭಿವೃದ್ಧಿಗಾಗಿ, ಆ ಸಮುದಾಯಗಳ ಅನುಕೂಲಕ್ಕಾಗಿ ಸಭಾ ಭವನ ನಿರ್ಮಿಸಲಾಗುತ್ತಿದೆ. ಆದರೆ, ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಿಸಿರುವ ಭವನಗಳು ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಅದಕ್ಕೆ ಜಿಲ್ಲಾ ವಾಲ್ಮೀಕಿ ಭವನ ಹೊರತಾಗಿಲ್ಲ.

ಕಳೆದ ಐದು ವರ್ಷಗಳ ಹಿಂದೆ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಹಿಂಬಾಗದ ಬಳಿ ಕರ್ನಾಟಕ ಸರಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೋಟ್ಯಾಂತರ ರೂ ವೆಚ್ಚದಲ್ಲಿ ಜಿಲ್ಲಾ ವಾಲ್ಮೀಕಿ ಭವನ ನಿರ್ಮಿಸಲಾಗಿದೆ. ಆದರೆ, ಸಮುದಾಯ ಭವನದ ಕಾಮಗಾರಿ ಇಲ್ಲಿಯವರೆಗೂ ಸಹ ಪೂರ್ಣಗೊಳ್ಳದೇ ಕುಂಟುತ್ತಾ ಸಾಗಿದೆ. ಅನುಧಾನದ ಕೊರತೆಯಿಂದ ಸುಂದರ ವಿನ್ಯಾಸದಲ್ಲಿ ನಿರ್ಮಾಣ ಮಾಡಿರುವ ಭನವಕ್ಕೆ ಇಂದು ಯಾರು ದಿಕ್ಕಿಲ್ಲದಂತಾಗಿದೆ. ಈ ಕಾರಣದಿಂದ ಭವನ ನಿರ್ಮಾಣವಾಗಿ 1 ವರ್ಷದಲ್ಲಿ ಕಿಟಕಿ ಬಾಗಿಲು ಒಡೆದು ಹೋಗಿವೆ. ಕಳ್ಳಕಾಕರಿಗೆ ಬಾಗಿಲು ತುತ್ತಾಗಿವೆ. ಪುಂಡ-ಪೋಕರಿಗಳ ಅವಾಸ ತಾಣವಾಗಿದೆ. ಜೊತೆಗೆ ಹಂದಿ-ನಾಯಿಗಳ ವಾಸಸ್ಥಾನವಾಗಿ ಬದಲಾಗಿದೆ. ಭವನದ ಕಿಟಕಿ-ಬಾಗಿಲುಗಳು ಕಳ್ಳ-ಕಾಕಾರಪಾಲಾಗುತ್ತಿದ್ದು, ನಿರ್ವಹಣೆಯಿಲ್ಲದೇ ಪಾಳು ಬಿದ್ದಿದೆ.

Contact Your\'s Advertisement; 9902492681

ಅನುದಾನ ದುರುಪಯೋಗ.?: ಜಿಲ್ಲಾ ವಾಲ್ಮೀಕಿ ಭವನಕ್ಕೆ ಸ್ಥಳೀಯ ನಗರಸಭೆಯ ಅನುದಾನದಲ್ಲಿ ಬಣ್ಣ ಹಚ್ಚುವ ಕಾಮಗಾರಿಯನ್ನು ಕಳೆದ ವರ್ಷ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಾಲ್ಮೀಕಿ ಭವನಕ್ಕೆ ಬಣ್ಣ ಹಚ್ಚುವ ಗುತ್ತಿಗೆಪಡೆದ ಗುತ್ತಿಗೆದಾರರು ಪೂರ್ಣ ಪ್ರಮಾಣದಲ್ಲಿ ಕಾಮಗಾರಿಯನ್ನು ಕೈಗೊಳ್ಳದೆ ಬಣ್ನ ಹಚ್ಚುವ ಕಾಮಗಾರಿಯನ್ನು ಅಪೂರ್ಣಮಾಡಿ ಬಣ್ಣ ಹಚ್ಚಲು ಅಳವಡಿಸಲಾಗಿದ್ದ ಸಾರವನ್ನು ಇಲ್ಲಿಯವರೆಗೂ ಹಾಗೆ ಕೈಬಿಟ್ಟಿದ್ದು. ಬಣ್ಣ ಬಳಿಸುಲ್ಲಿ ಅನುದಾನ ದೂರುಪಯೋಗವಾಗಿದೆ. ಸಂಪೂರ್ಣವಾಗಿ ಬಣ್ಣ ಹಚ್ಚಬೇಕಿತ್ತು. ಆದರೆ ವೈಟ್ ಪೈಮರ್‍ನ್ನು ಬಳಿಸಿ ಬಣ್ಣ ಹಚ್ಚುವ ಗುತ್ತಿಗೆದಾರರು ಹಣ ಪಡೆದಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ವಾಲ್ಮೀಕಿ ಭವನದ ಅನುದಾನ ದುರುಪಯೋಗಪಡೆಸಿಕೊಂಡಿದ್ದಾರೆಂದು ಸಮಾಜದ ಅನೇಕ ಯುವ ಮುಖಂಡರು ಆರೋಪಿಸಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ 19ಗುಂಠೆ ನಿವೇಶನದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ನಾಲ್ಕೈದು ವರ್ಷಗಳು ಕಳೆದರು ಸಹ ವಾಲ್ಮೀಕಿ ಭವನ ಅನುಧಾನದ ಕೊರತೆಯಿಂದ ಅಪೂರ್ಣಗೊಂಡಿದ್ದು, ಭವನದ ಕಾಮಗಾರಿ ಇನ್ನು ಕುಂಟುತ್ತಾ ತೆವಳುತ್ತಾ ಸಾಗಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣಗೊಂಡಿದ್ದರು. ಸಹ ಕಳೆದ ವರ್ಷ 2018ರಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದ ಗುತ್ತಿಗೆದಾರರು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿದ್ದಾರೆಂದು ತಿಳಿದು ಬಂದಿದೆ.

ವಾಲ್ಮೀಕಿ ಭವನದ ಕಾಮಗಾರಿ ಕಳಪೆಯಾಗಿದ್ದು, ಕಟ್ಟಡದ ನಿರ್ವಹಣೆ ಇಲ್ಲದೆ ಈಗಾಗಲೇ ಕಟ್ಟಡದ ಕಿಟಕಿ, ಬಾಗಿಲುಗಳು ಕಳ್ಳ-ಕಾಕರ ಪಾಲಾಗಿವೆ. ಕಿಟಕಿಗೆ ಅಳವಡಿಸಲಾಗಿದ್ದ ಕಾಜುಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದು, ವಾಲ್ಮೀಕಿ ಭವನದ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಸಮಾಜದ ಯಾವುದೇ ಸಭೆ -ಸಮಾರಂಭಗಳನ್ನು ಯೋಗ್ಯವಲ್ಲದ ಸ್ಥಿತಿಯಲ್ಲಿ ಕಟ್ಟಡವಿದೆ. ನಗರಸಭೆಯ ಅನುದಾನದಲ್ಲಿ ವಾಲ್ಮೀಕಿ ಭವನದ ಸುತ್ತ ಕಂಪೌಂಡ ಗೋಡೆ ನಿರ್ಮಿಸಲಾಗಿದ್ದು, ಕಳೆದ ವರ್ಷ ಇಲ್ಲಿಯೇ ವಾಲ್ಮೀಕಿ ಜಯಂತಿ ಮಾಡುವುದಾಗಿ ಸಮಾಜದ ಯುವ ಮುಖಂಡರು ಪಟ್ಟು ಹಿಡಿದ ಕಾರಣಕ್ಕೆ ತರಾತುರಿಯಲ್ಲಿ ಸಭಾಭವನಕ್ಕೆ ಲೈಟುಗಳನ್ನು ಅಳವಡಿಸಿ, ಅಳಿದುಳಿದ ಕಾಮಗಾರಿಗೆ ತೇಪೆಸಾರಿಸಿ ಭವನವನ್ನು ಜಯಂತಿಗೆ ಸಿದ್ದಪಡಿಸಲಾಗಿತ್ತು. ಜಯಂತಿಯಾದ ಬಳಿಕ ಇಂದಿನ ವರೆಗೂ ಯಾರು ಸಹ ಭವನದತ್ತ ತಲೆ ಹಾಕದಕ್ಕೆ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ಭವನಕ್ಕೆ ಅಳವಡಿಸಲಾಗಿದ್ದ ಲೈಟುಗಳನ್ನು ದುಷ್ಕರ್ಮಿಗಳು ಒಡೆದುಹಾಕಿದ್ದಾರೆ. ಸುಸಜ್ಜಿತವಾದ ನೆಲಮಹಡಿ, ಸಭಾ ಭವನ, ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಈವುಗಳ ಕಾಮಗಾರಿ ಅಪೂರ್ಣಗೊಂಡಿದ್ದು ನೆಲಮಹಡಿಯಲ್ಲಿ ಇನ್ನು ಕಾಮಗಾರಿ ಬಾಕಿ ಇದೆ. ನಿರ್ವಹಣೆ ಇಲ್ಲದ ಕಾರಣಕ್ಕೆ ಭವನದ ಶೌಚಾಲಯಗಳು ಹಾಳಾಗಿವೆ. ಬಚ್ಚಲುಮನೆಗಳು ಕೂಡಾ ಹಾಳಾಗಿವೆ. ಕೆಲವುಕಡೆಗಳಲ್ಲಿ ಅಳವಡಿಸಿದ್ದ ಟೈಲ್ಸ್‍ಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಎಲ್ಲಂದರಲ್ಲಿ ಗಿಡ-ಗಂಟೆಗಳು ಬೆಳೆದಿದ್ದು, ವಾಲ್ಮೀಕಿ ಭವನವು ಪಾಳು ಬಿದ್ದಿರುವ ಕಟ್ಟಡದಂತಾಗಿದೆ.

ಬರುವ ತಿಂಗಳು ಅಕ್ಟೋಬರ್ 13ಕ್ಕೆ ವಾಲ್ಮೀಕಿ ಜಯಂತಿ ಇದ್ದು, ವಾಲ್ಮೀಕಿ ಜಯಂತಿಗೆ ಇನ್ನು 27ದಿನಗಳು ಬಾಕಿ ಇದ್ದು, ಇನ್ನು ಬಾಕಿ ಕಾಮಗಾರಿಗಳು ಬಾಕಿ ಇರುವುದರಿಂದ ಅ.13ಕ್ಕೆ ಜರುಗುವ ವಾಲ್ಮೀಕಿ ಜಯಂತಿಯೊಳಗೆ ವಾಲ್ಮೀಕಿ ಭವನ ಬಳಕೆಗೆ ಯೋಗ್ಯವಾಗುವಂತೆ ಸಬ್ಬಂಧ ಪಟ್ಟ ಇಲಾಖೆ ಮಾಡಿ ಕೊಡಬೇಕು ಎಂಬುದು ಸಮಾಜ ಬಾಂಧವರ ಆಶಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here