ಪಿಎಚ್.ಡಿ ಪ್ರವೇಶ ಪರೀಕ್ಷೆ ಪುನಃ ಏರ್ಪಡಿಸಿ: ಡಾ.ಪ್ರಕಾಶ ಹಾಗರಗಿ ಮನವಿ

0
150

ಕಲಬುರಗಿ: ಇದೇ ದಿ.12 ರಂದು ಜರುಗಿದ ಪಿಎಚ್.ಡಿ ಪ್ರವೇಶಾತಿಯ ಅರ್ಥಶಾಸ್ತ್ರ ಸೇರಿದಂತೆ ಕೆಲವು ವಿಷಯಗಳಲ್ಲಿ, ಕೆಲವು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳು ಮೋಬೈಲ್ ಬಳಸಿ ಉತ್ತರಗಳನ್ನು ಕೇಳಿ ಬರೆದಿರುವುದು, ಗೂಗಲ್‌ನಲ್ಲಿ ಹುಡುಕಿ, ಪರಸ್ಪರ ಚರ್ಚೆ ಮಾಡಿ ಉತ್ತರಿಸಿರುವುದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಹೇಳಿಕೆ ಮತ್ತು ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದರಿಂದ ಬಡ, ಪ್ರತಿಭಾವಂತ ವಿದ್ಯಾಥಿಗಳಿಗೆ ಅನ್ಯಾಯವಾಗಿದ್ದು, ಅತ್ಯಂತ ಬಂದೋಬಸ್ತ್‌ನಲ್ಲಿ ಶೀಘ್ರದಲ್ಲಿ ಪುನಃ ಪರೀಕ್ಷೆ ಏರ್ಪಡಿಸುವ ಮೂಲಕ ಪ್ರಾಮಾಣಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಹೋರಾಟಗಾರ, ಸಮಾಜ ಸೇವಕ ಡಾ.ಪ್ರಕಾಶ ಹಾಗರಗಿ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಅವರು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯೊಂದಿಗೆ ಶುಕ್ರವಾರ ಕುಲಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕೊಠಡಿಯಲ್ಲಿ ಪರೀಕ್ಷೆ ಮುಗಿಯುವ ತನಕ ಮೋಬೈಲ್‌ನಲ್ಲಿ ಉತ್ತರಗಳನ್ನು ಕೇಳಿ ಬರೆಯುತ್ತಿದ್ದ ಪಕ್ಕದ ವಿದ್ಯಾಥಿಯೊಬ್ಬ ಪ್ರಶ್ನಿಸಿದಕ್ಕೆ ’ಹೊರಗಡೆ ನೀನು ಬಾ, ನಿನ್ನ ನೋಡಿಕೊಳ್ಳುವೆ’ ಎಂದು ಜೀವ ಬೆದರಿಕೆ ಹಾಕಿರುವುದು ಅವ್ಯವಹಾರ, ದುರ್ನಡತೆ, ಅಶಿಸ್ತು, ಪರೀಕ್ಷಾ ಪಾವಿತ್ರ್ಯತೆಯ ಉಲ್ಲಂಘನೆಯಾಗಿದ್ದು, ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಂಡು, ಪುನಃ ಪರೀಕ್ಷೆ ನಡೆಸುವ ಮೂಲಕ ನಿಷ್ಠಾವಂತರ ಆಯ್ಕೆ ಮಾಡಬೇಕೆಂದು ಕೋರಿದ್ದಾರೆ.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಕುಲಪತಿ ಪ್ರೊ.ಪರಿಮಳ ಅಂಬೇಕರ್, ಈ ವಿಷಯದ ಬಗ್ಗೆ ನಾನೂ ಕೂಡಾ ಪತ್ರಿಕೆಗಳಲ್ಲಿನ ವರದಿಯನ್ನು ಗಮನಿಸಿದ್ದೇನೆ. ಪ್ರಾಮಾಣಿಕ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ, ವಿಷಯ ಸಂಬಂಧಿಕರ ಜೊತೆಗೆ ಶೀರ್ಘದಲ್ಲಿ ಚರ್ಚಿಸಿ, ಪರಿಶೀಲಿಸಿ, ಸೂಕ್ತವಾದ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪಿಎಚ್.ಡಿ ಪರೀಕ್ಷೆ ಬರೆದ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here