ಕಲಬುರಗಿ, ಯಾದಗಿರಿ ಜಿಲ್ಲೆಯ 629 ಹಜ್ ಯಾತ್ರಾರ್ಥಿಗಳಿಗೆ ಲಸಿಕೆ

0
92

ಕಲಬುರಗಿ: ಕಲಬುರಗಿ ನಗರ ನಯಾ ಮೋಹಲ್ಲಾ ಪ್ರದೇಶದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ ಸಿ ಎಚ್ ವಿಭಾಗ ಹಾಗೂ ಹಜ್ ಕಮಿಟಿ ರವರ ಸಹಯೋಗದಲ್ಲಿ 2024 ಹಜ್ ಯಾತ್ರೆಗೆ ಹೋಗುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಯಾತ್ರಾರ್ಥಿ ಗಳಿಗೆ ಲಸಿಕೆ ಹಾಕುವ ಶಿಬಿರವನ್ನು ಹಜ್ ಕಮಿಟಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಯಿತು.

ಈ ಶಿಬಿರದಲ್ಲಿ ಕಲಬುರಗಿ ಜಿಲ್ಲೆಯ 542 ಹಜ್ ಯಾತ್ರಾರ್ಥಿಗಳಿಗೆ ಹಾಗೂ ಯಾದಗಿರಿ ಜಿಲ್ಲೆಯ 87 ಯಾತ್ರಾರ್ಥಿಗಳು ಸೇರಿ ಒಟ್ಟು 629 ಹಜ್ ಯಾತ್ರಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.

Contact Your\'s Advertisement; 9902492681

ಲಸಿಕಾ ಶಿಬಿರದ ನೇತೃತ್ವವನ್ನು ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳಾದ. ಡಾ. ಶರಣಬಸಪ್ಪ ಕ್ಯಾತಾನಾಳ ರವರು ವಹಿಸಿಕೊಂಡಿದ್ದರು. ಲಸಿಕಾಕರಣದ ಮಾರ್ಗಸುಚಿಯಂತೆ ಜಿಮ್ಸ್ ಜಿಲ್ಲಾಸ್ಪತ್ರೆ ಯಿಂದ ತಜ್ಞ ವೈದ್ಯರಾದ ಡಾ. ನಸರತ ಜಹಾನ್ , ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು ಡಾ. ಆಸ್ಮಾ . ಶ್ವಾಸಕೋಶ ತಜ್ಞರಾದ ಡಾ. ಮಣಿದೇವಿ .ಮಕ್ಕಳ ತಜ್ಞರಾದ ಡಾ. ಜಯರಾಜ್ ತಾಲೂಕು ಆರೋಗ್ಯ ಅಧಿಕಾರಿಗಳದ ಡಾ. ಮಾರುತಿ ಕಾಂಬಳೆ , ಆಡಳಿತ ವೈದ್ಯಧಿಕಾರಿಗಳಾದ ಡಾ. ವೇಣುಗೋಪಾಲ್ ದೇಶಪಾಂಡೆ, ಡಾ. ರೇಣುಕಾ ಕಟ್ಟಿ, ಡಾ. ಮಂಗಲಾ ಪಾಟೀಲ್ ವೈದ್ಯಧಿಕಾರಿಗಳು, ಖಾನಾಪುರ, ಡಾ. ಇಸಾಮುದ್ದಿನ್. ಆಯುಷ್ ವೈದ್ಯಧಿಕಾರಿಗಳು, ಹಾಗೂ ಅರೋಗ್ಯ ಇಲಾಖೆಯ ಲಸಿಕಾರಣ ಸಿಬ್ಬಂದಿಗಳು, ಮೇಲ್ವಿಚಾರಣಾ ಸಿಬ್ಬಂದಿಗಳು, ಎಲ್ ಡಿ ಸಿ ಗಳು ಹಾಜರಿದ್ದರು. ಹಜ್ ಕಮಿಟಿಯ ಸಂಘಟಕರು ಮೌಲಾನಾ ಯಾಹ್ಯಾ, ಮಜರ್ ಹುಸೇನ್ ಹಾಗೂ ರಝಿಯುದ್ದಿನ್ ಖಾತಿಫ್ ಹಜ್ ಕಮಿಟಿ ಮುಖ್ಯಸ್ಥರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here