ಸುರಪುರ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗು ದಲಿತ ಹಕ್ಕುಗಳ ಸಮಿತಿ ಕರ್ನಾಟ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಗರದ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ರಾಜ್ಯದಲ್ಲಿರುಬ ದೇವದಾಸಿ ಮಹಿಳೆಯರಿಗೆ ಹಲವಾರು ಸಮಸ್ಯೆಗಳಿದ್ದು,ಇದನ್ನು ಅನೇಕ ಬಾರಿ ಸರಕಾರದ ಗಮನ್ಕಕೆ ತರಲಾಗಿದೆ.ಆದರು ಇದುವರೆಗೆ ಅವುಗಳನ್ನು ಈಡೇರಿಸುತ್ತಿಲ್ಲ.ಇದನ್ನು ಖಂಡಿಸಿ ಹಾಗು ಕೂಡಲೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ,ಎಲ್ಲಾ ದೇವದಾಸಿ ಮಹಿಳೆಯರಿಗೆ ಮಾಸಿಕ ೫ ಸಾವಿರ ರೂಪಾಯಿ ಸಹಾಯ ಧನ ನೀಡಬೇಕು,ಗಣತಿಯಲ್ಲಿ ಕೈ ಬಿಟ್ಟು ಹೋದ ಮಹಿಳೆಯರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು.ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ದೇವದಾಸಿ ಮಹಿಳೆಯರು ಪಡೆದಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಬೇಕು.
ವ್ಯವಸಹಾಯ ಮಾಡಲು ಇಚ್ಛಿಸುವ ದೇವದಾಸಿ ಮಹಿಳೆಯರು ಮತ್ತು ಮಕ್ಕಳಿಗೆ ತಲಾ ಐದು ಎಕರೆ ಜಮೀನು ನೀಡಬೇಕು. ನಿವೇಶನ ರಹಿತ ಮಹಿಳೆಯರಿಗೆ ನಿವೇಶನ ನೀಡಬೇಕು. ದೇವದಾಸಿ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳೊಂದಿಗೆ ಕನಿಷ್ಟ ಐದು ಲಕ್ಷ ರೂಪಾಯಿಗಳ ಸೌಲಭ್ಯ ನೀಡಬೇಕು. ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿದಿದ್ದು ಕಾರ್ಮಿಕರಿಗೆ ಕನಿಷ್ಠ ಎರಡು ನೂರು ದಿನಗಳ ಕೆಲಸ ಒದಗಿಸಬೇಕು ಮತ್ತು ಕೂಲಿ ಹಣವನ್ನು ಆರು ನೂರು ರೂಪಾಯಿಗೆ ಹೆಚ್ಚಿಸಬೇಕು.ಅಂಗನವಾಡಿ ಕೇಂದ್ರಗಳನ್ನು ಎಲ್.ಕೆ.ಜಿ,ಯು.ಕೆ.ಜಿ ಶಿಕ್ಷಣ ನೀಡಲು ಕ್ರಮವಹಿಸಿ ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಧರಣಿಯಲ್ಲಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ,ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ,ದಲಿತ ಹಕ್ಕುಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಕಾಶ ಆಲ್ಹಾಳ,ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ,ಮರಿಯಪ್ಪ ಕಾಂಗ್ರೇಸ್, ಭೀಮರಾಯ ಮಳಿಕೇರಿ, ಬೀರಲಿಂಗ ಗೌಡಗೇರಾ, ಭೀಮವ್ವ, ಮರೆಮ್ಮ, ತಂಗೆಮ್ಮ, ಭೀಮಬಾಯಿ, ಸರಸ್ವತಿ, ಮರೆಮ್ಮ ದೊಡ್ಮನಿ, ಬಸ್ಸಮ್ಮ, ಯಮನವ್ವ,ಶಿವಶಂಕರ ಹೊಸಮನಿ, ಯಲ್ಲಮ್ಮ, ನಂದಮ್ಮ,ಚಂದಮ್ಮ, ರೇವಣಸಿದ್ದ ಗುಡಿಮನಿ ಸೇರಿದಂತೆ ಅನೇಕರಿದ್ದರು.