ಸುರಪುರ: ತಾಲ್ಲೂಕಿನ ಅರಕೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಯಾವುದೆ ಕಾಮಗಾರಿ ಕೈಗೊಳ್ಳದೆ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಗ್ರಾಮದಲ್ಲಿನ ಎಲ್ಲಾ ರಸ್ತೆಗಳು ಸಂಪೂರ್ಣ ಹಾಳಾಗಿವೆ.ಚರಂಡಿ ನೀರು ರಸ್ತೆ ಮೇಲೆಯೆ ಹರಿಯುತ್ತಿವೆ.ಸಿಸಿ ರಸ್ತೆಗಳು ಕಿತ್ತು ಹೋಗಿವೆ.ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ತೊಂದರೆ ಪಡುವಂತಾಗಿದೆ,ಇಂತಹ ಅನೇಕ ಸಮಸ್ಯೆಗಳ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನೆಯಾಗುತ್ತಿಲ್ಲ.ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಅಭೀವೃಧ್ಧಿ ಅಧಿಕಾರಿಗಳು ಸೇರಿ ೧೪ನೇ ಹಣಕಾಸು ಯೊಜನೆಯ ಹಣವನ್ನು ಲಪಟಾಯಿಸಿದ್ದಾರೆ.ಅಲ್ಲದೆ ಗ್ರಾಮದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರು ಇವೆಲ್ಲ ಕಾಮಗಾರಿಗಳ ಮಾಡಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಹಣ ಡ್ರಾ ಮಾಡಲಗಿದೆ.ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಡಿಯೂ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಲಾಗಿದೆ.ಇವೆಲ್ಲವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಗಂಭೀರವಾಗಿ ಪರಿಗಣಿಸಿ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕು ಮುನ್ನ ನೂರಾರು ಸಂಖ್ಯೆಯ ಗ್ರಾಮಸ್ಥರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಹಾಗು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ಆಗಮಿಸಿ ಮನವಿ ಸ್ವೀಕರಿಸಿ ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಆನಂದ ವಿಶ್ವಕರ್ಮ,ದಾನಪ್ಪ ಕಡಿಮನಿ,ಹಣಮಂತಗೌಡ ಪಾಟೀಲ,ಯಲ್ಲಪ್ಪ ಮಟ್ಲ,ಶರಣಯ್ಯ ಸ್ವಾಮಿ,ವೆಂಕಟೇಶ ಪುಡೂರ,ಡಾ:ಚಂದ್ರಕಾಂತ ಮ್ಯಾಕಲ್,ಮಲ್ಲಿಕರ್ಜುನ ಸುಗೂರ,ಪ್ರಭಯ್ಯ ಸ್ವಾಮಿ,ಶಂಕರಪ್ಪ ಬಲ್ಪುರಿ,ಜನಾರ್ಧನ ಬತ್ತಲ್,ಶರಣಪ್ಪ ಮಿಟ್ಟಾ,ಶರಣು ಬಳಿಗಾರ,ಪ್ರಶಾಂತ ಬಳಿಗಾರ,ರಮೇಶ ಹಬ್ಬಾ,ಹಣಮಂತ ಸುರಪುರಕರ್,ಭೀಮಣ್ಣ ಮಟ್ಲಾ,ಬಸವರಾಜ ಕಡಿಮನಿ,ಮಲ್ಲಿಕಾರ್ಜುನ ಸುಗೂರು ಸೇರಿದಂತೆ ಅನೇಕರಿದ್ದರು.