ಕಲಬುರಗಿ: ಈಶಾನ್ಯ ಪದವೀಧರ ಕ್ಷೇತ್ರಕ್ಕೇ ಜೂನ್ 03 ರಂದು ಚುನಾವಣೆ ಘೋಷಣೆ ಆಗಿದ್ದು, ಬಿಜೆಪಿಯ ಹಿರಿಯ ಮುಖಂಡ , ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಸುರೇಶ ಸಜ್ಜನ ರವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ಗೆಲುವ ನಿಶ್ಚಿತ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚ ಉಪಾಧ್ಯಕ್ಷ ಹಾಗೂ ಬಿಎಸ್ಎನ್ಎಲ್ ಸಲಹಾ ಸಮಿತಿ ವಿಭಾಗ ನಾಮನಿರ್ದೇಶತ ಸದಸ್ಯರಾದ ಸುರೇಶ್ ಪಾಟೀಲ್ ನೇದಲಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಈಗಾಗಲೇ ಚುನಾವಣೆ ತಯಾರಿಯ ಭಾಗವಾಗಿ ಸತತ ಮೂರು ವರ್ಷದಿಂದ ಕಲ್ಯಾಣ ಕರ್ನಾಟಕ ಶಿಕ್ಷಕರ ಹಾಗೂ ಪದವೀಧರರ ಕಲ್ಯಾಣ ಅಭಿವೃದ್ಧಿ ಸಂಘವನ್ನು ರಚನೆ ಮಾಡಿಕೊಂಡು ಮತಕ್ಷೇತ್ರ ವ್ಯಾಪ್ತಿಯ ಏಳು ಜಿಲ್ಲೆಗಳ ಪ್ರವಾಸ ಮಾಡಿ ನಾಲ್ಕು ಜಿಲ್ಲೆಗಳಲ್ಲಿ ಸಂಘದ ಕಚೇರಿ ತೆಗೆಯೋ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪದವೀಧರರ ನೋಂದಣಿಗೆ ಪ್ರಯತ್ನ ಮಾಡಿ ಸುಮಾರು 25,000 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೋಂದಣಿ ಮಾಡಿಸಿದ್ದಾರೆ.
ಶಿಕ್ಷಕರಿಗಾಗಿ ಜ್ಯೋತಿ ಸಂಜೀವಿನಿ ಸ್ಮಾರ್ಟ್ ಕಾರ್ಡನ್ನು ಕಲಬುರಗಿ , ಬೀದರ್ ಯಾದಗಿರ್ , ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಪ್ರತಿ ಹಂತದಲ್ಲಿ ಕಾರ್ಯಕ್ರಮಗಳನ್ನು ಮಾಡು ಮೂಲಕ 20,000ಕ್ಕೂ ಹೆಚ್ಚಿನ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ್ದಲ್ಲದೆ
ಪದವೀಧರರ ಹಾಗೂ ಶಿಕ್ಷಕರ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮಗಳು , ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೇರಿದಂತೆ 2024 ನೇ ಸಾಲಿನ ಕ್ಯಾಲೆಂಡರ್ ಗಳನ್ನು ವಿತರಿಸಿ
ಎಲ್ಲಾ ಶಿಕ್ಷಕರ ಸಂಘಗಳ ಸಹಭಾಗಿತ್ವವನ್ನು ಪಡೆದುಕೊಂಡು ಎಲ್ಲಾ ಜಿಲ್ಲಾ ಘಟಕ ಹಾಗೂ ತಾಲೂಕ ಘಟಕಗಳಿಗೆ ಭೇಟಿ ನೀಡಿ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದನೆ ನೀಡಿದ್ದು ಸುರೇಶ್ ಸಜ್ಜನ ಅವರಿಗೆ ವರದಾನವಾಗಲಿದೆ ಎಂದರು.
ಎಲ್ಲಾ ಸಮಾಜಗಳೊಡನೆ ನಿಕಟ ಸಂಪರ್ಕ ಹೊಂದಿರುವ ವಿಶೇಷವಾಗಿ ಪದವೀಧರರ ಕ್ಷೇತ್ರಕ್ಕೆ ಮೂರ್ನಾಲ್ಕು ವರ್ಷಗಳಿಂದ ತಯಾರಿ ನಡೆಸಿರುವ ಎಲ್ಲಾ ವಾಸ್ತವ ಅಂಶಗಳನ್ನು ಪರಿಗಣಿಸಿ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಿದ್ದೆ ಆದಲ್ಲಿ ಗೆಲವು ನಿಶ್ಚಿತವಾಗಲಿದ್ದು, ಸಜ್ಜನವರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಜೈ ಬಿ ಜೆ ಪಿ