ಹಿರಿಯ ನಾಗರಿಕರ ವೃದ್ದಪ್ಯವೇತನ ಹೆಚ್ಚಳಕ್ಕೆ ಆಗ್ರಹ

0
21

ಚಿತ್ತಾಪುರ : ಹಿರಿಯ ನಾಗರಿಕರ ವೃದ್ದಪ್ಯವೇತನ 600 ರೂಪಾಯಿ ಪಡೆಯುತ್ತಿದ್ದು, ಅದನ್ನು 1000 ರೂ ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಹೊಂಗೀರಣ ತಾಲೂಕು ಹಿರಿಯ ನಾಗರಿಕರರ ಹಾಗು ವಯೋವೃದ್ದರ ಕ್ಷೇಮಾಭಿವೃದ್ಧಿ ಸಂಘ ಚಿತ್ತಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಚಿತ್ತಾಪುರ ಪಟ್ಟಣದ ಡಾ.ಬಿಆರ್ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪತ್ರಿಭಟನೆ ಮೆರವಣಿಗೆ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚಾರಿಸಿ ತಹಸೀಲ್ದಾರ ಕಾರ್ಯಾಲಯಕ್ಕೆ ತಲುಪಿತು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಮಹಮ್ಮದ್ ಇಬ್ರಾಹಿಂ ಮಾತನಾಡಿ. ಸಂಧ್ಯಾ ಸುರಕ್ಷತಾ ಯೋಜನೆಯಲ್ಲಿ ಈಗಾಗಲೇ 1000 ರೂ ಪಡೆಯುತ್ತಿದ್ದೇವೆ. ಅದನ್ನು 3000 ಸಾವಿರ ರೂ ಹೆಚ್ಚಿಸಬೇಕು. ಹಿರಿಯ ನಾಗರಿಕರರ ಆರೋಗ್ಯ ತಪಾಸಣೆಗೆ ಸರ್ಕಾರಿ ಆಸ್ಪತ್ರೆ ಗಳಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ, ನ್ಯಾಯ ಬೆಲೆ ಅಂಗಡಿ ಮೂಲಕ ಕಡುಬಡವರಿಗೆ ಸಕ್ಕರೆ, ಎಣ್ಣೆ, ಗೋಧಿ,ಬೆಳೆ ಒದಗಿಸಬೇಕೆಂದು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here