ಸ್ತ್ರೀ ಕನಸು ಹೌದು,ವಾಸ್ತವವು ಹೌದು: ಡಾ.ಮಹೇಶ ಗಂವ್ಹಾರ

0
41

ಶಹಾಬಾದ್: ಮಹಿಳೆಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ ಸ್ತ್ರೀ ಕನಸು ಹೌದು ವಾಸ್ತವವು ಹೌದು ಅವಳು ಬದುಕಿನುದ್ದಕ್ಕೂ ಕನಸುಗಳನ್ನು ಕಟ್ಟಿಕೊಂಡು ಕನಸಿನ ಭ್ರಮೆಯಲ್ಲಿಯೆ ಬದುಕದೇ ವಾಸ್ತವಿಕ ಸ್ಥಿತಿಗತಿಗಳನ್ನು ಅರಿತುಕೊಂಡು ಪರಿಸ್ಥಿತಿಗೆ ಹೊಂದಿಕೊಂಡು ಬದುಕುವ ವಿಶೇಷತೆ ಅವಳಲ್ಲಿದೆ ಎಂದು ಶ್ರೀಮತಿ.ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮಖ್ಯಸ್ಥರಾದ ಡಾ.ಮಹೇಶ ಗಂವ್ಹಾರ ಹೇಳಿದರು.

ಅವರು ಶಹಾಬಾದನ ಶ್ರೀ ಎಸ್.ಎಸ್.ಮರಗೊಳ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ‌ಮುಖ್ಯ ಅತಿಥಿಗಳಾಗಿ ” ಆಧುನಿಕ ಭಾರತದಲ್ಲಿ ಮಹಿಳೆಯ ಪಾತ್ರ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡುತ್ತಾ ಹೇಳಿದರು.

Contact Your\'s Advertisement; 9902492681

ದುವರೆದು ಮಾತನಾಡಿದ ಅವರು ಇಂದು ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ, ಸಮಾನತೆ, ಮೊದಲಾದ ಅವಕಾಶಗಳನ್ನು ಪಡೆದರು ಅವಳು ಸುಖವಾಗಿದ್ದಾಳೆಯೆ?.ಎಂಬ ಪ್ರಶ್ನೆಗೆ ಇಲ್ಲಾ ಎನ್ನುವ ನೀಖರವಾದ ಉತ್ತರ ಸಿಗುತ್ತದೆ. ಗ್ರಾಮೀಣ, ನಗರ ಮಹಿಳೆಯರು ಅಸಂಘಟಿತ, ಹಾಗೂ ಸಂಘಟಿತ ವಲಯಗಳಲ್ಲಿ ಎದುರಿಸುವ ಸಮಸ್ಯೆ ಗಳಿಗೆ ಮಂಗಲ ಹಾಡಿದಾಗ ಮಾತ್ರ ಅವಳು ಸುಖವಾಗಿ ಬದುಕಿ ಬಾಳಬಲ್ಲಳು ಎಂದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜ ಹೀರೆಮಠ ವಹಿಸಿಕೊಂಡಿದ್ದರು.ಅತಿಥಿಗಳಾಗಿ ಗ್ರಂಥಪಾಲಕರಾದ ಶ್ರೀಮತಿ ಲಲಿತಾ ಭಾಗವಹಿಸಿದ್ದರು.

ವೇದಿಕೆಯ ಮೇಲೆ ರಾ.ಸೇ.ಯೋ ಅ ಮತ್ತು ಬ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ಎಮ್.ಕೆ.ಬೋತಗಿ ಹಾಗೂ ಡಾ.ಶ್ರೀಮಂತ ಹೂವಿನಳ್ಳಿ ಉಪಸ್ತಿತರಿದ್ದರು .ಕಾವೇರಿ ತಂಡದ ಶಿಬಿರಾರ್ಥಿಗಳು ಸ್ವಾಗತಿಸಿ ವಂದಿಸಿದರು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಡಾ.ಗಂಧಿಗುಡಿ, ಡಾ.ಸ್ಥಾವರಮಠ,ಡಾ.ಹನಮಂತಪ್ಪಾ ಸೇಡಂಕರ್,ಡಾ.ವೆಂಕಟೇಶ ಪೂಜಾರಿ,ಡಾ.ಜಗದೇವಿ ಹೀರೆಮಠ .ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here