371ನೇ ಕಲಂ ವಿರೋಧಿ ಶಕ್ತಿಗಳ ವಿರುದ್ಧ ಬೃಹತ್ ಪ್ರತಿಭಟನೆ

0
41

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಜಾರಿಯಾಗಿರುವ ಸಂವಿಧಾನದ 371ನೇ.ಜೇ ಕಲಂ ವಿಶೇಷ ಸ್ಥಾನಮಾನದಿಂದ ಕರ್ನಾಟಕ ರಾಜ್ಯದ ಇಪ್ಪತ್ನಾಲ್ಕು ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವ ಬೆಂಗಳೂರಿನ ಕೆಲವು ಸಂವಿಧಾನ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು ಹಸಿರು ಪ್ರತಿಷ್ಠಾನ ಸಂಘಟನೆಯ ಮೂಲಕ ಕಲ್ಯಾಣ ಕರ್ನಾಟಕದ ಜನರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಯ ವಿರುದ್ಧ ಇಂದು ವಿಭಾಗೀಯ ಕೇಂದ್ರ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೃಹತ್ ಹೋರಾಟದ ಮೂಲಕ ಕಲ್ಯಾಣ ಕರ್ನಾಟಕ ವಿರೋಧಿ ಶಕ್ತಿಗಳಿಗೆ ಎಚ್ಚರಿಕೆ ನೀಡಲಾಯಿತು.

ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸುಮಾರು ಆರು ಸಾವಿರ ಆಯಾ ಶಿಕ್ಷಣ ಸಂಸ್ಥೆಗಳ ,ಸರಕಾರಿ ಮತ್ತು ಅರೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಮುಖಂಡರು ಕಾಲೇಗಳ ಪ್ರಾಚಾರ್ಯರು, ಪ್ರಾಧ್ಯಾಪಕರು, ಬುದ್ಧಿಜೀವಿಗಳ, ಚಿಂತಕರು,ಜನಪರ, ಕನ್ನಡ ಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ, ಯುವ ವಿದ್ಯಾರ್ಥಿ ಕಾರ್ಮಿಕ,ರೈತ ಯುವಪರ ಸಂಘಟನೆಗಳ ಹಾಗೂ ಆಯಾ ಕ್ಷೇತ್ರದ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

Contact Your\'s Advertisement; 9902492681

ಈ ಬೃಹತ್ ಪರ್ತಭಟನಾ ಹೋರಾಟ ಉದ್ದೇಶಿ ಶಿಕ್ಷಣ ಸಂಸ್ಥೆಗಳ ಮುಖಂಡರಾದ ಹೈ.ಶಿ . ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್, ಚಂದ್ರಶೇಖರ ಶೀಲವಂತ, ಆಲ್ ಖಮರ್ ಸಂಸ್ಥೆಯ ಅಧ್ಯಕ್ಷರಾದ ಅಸದ್ ಅನ್ಸಾರಿ ಹದಿನೈದು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮಾತ್ನಾಡಿ ಕಲ್ಯಾಣ ಕರ್ನಾಟಕದ 371ನೇ ಜೇ ಕಲಂ ವಿರೋಧಿ ಶಕ್ತಿಗಳ ಧೋರಣೆಗೆ ಖಂಡಿಸಿ ಸಂವಿಧಾನ ವಿರೋಧಿ ಹಸಿರು ಪ್ರತಿಷ್ಠಾನ ಸಂಘಟನನೆಗೆ ನಿಷೇಧಿಸಲು ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಹೋರಾಟಗಾರ ಲಕ್ಷ್ಮಣ ದಸ್ತಿ ಹಸಿರು ಪ್ರತಿಷ್ಠಾನ ಸಂಘಟನೆಯವರು 371ನೇ ಕಲಂ ವಿರುದ್ಧ ಇಪ್ಪತ್ನಾಲ್ಕು ಜಿಲ್ಲೆಗಳ ಜನರಿಗೆ ಸುಳ್ಳು ಸುದ್ದಿ ಹುಟ್ಟಿಸಿ ಕಲ್ಯಾಣ ಕರ್ನಾಟಕದ ಸಂವಿಧಾನ ಬದ್ಧ ಹಕ್ಕಿನ ಮೂಲ ಉದ್ದೇಶ ಗಾಳಿಗೆ ತೋರಿ ತಪ್ಪು ಸಂದೇಶ ಪ್ರಚಾರ ಮಾಡುತಿದ್ದಾರೆ ಇಂದಿನ ಸಾಂಕೇತಿಕ ಹೋರಾಟ ಮೊದಲನೇ ಹಂತದ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.

ಚಿಂತಕರು, ಬುದ್ಧಿಜೀವಿಗಳಾದ ಪ್ರತಾಪಸಿಂಗ್ ತಿವಾರಿ,ಆರ್ ಕೆ ಹುಡುಗಿ, ಬಸವರಾಜ ಕುಮ್ಮನೂರ್, ಡಾ.ಗಲಶೆಟ್ಟಿ,ಡಾ.ಶರಣಪ್ಪ ಸೈದಾಪುರ , ಡಾ.ಸಗೀತಾ ಕಟ್ಟಿ, ಚಂದ್ರಶೇಖರ ಪಾಟೀಲ ಹುಚಕನಳ್ಳಿ ,ಬಿ.ಬಿ. ನಾಯಕ ಡಾ.ಮಾಜೀದ ದಾಗಿ, ಪ್ರೊ.ಬಿರಾದಾರ ಮೇಡಮ್,ರೇಣುಕಾ ಸಿಂಘೆ, ಡಾ.ಗಾಂಧೀಜಿ ಮೋಳಕೇರಿ, ಡಾ.ಮಲ್ಲಿಕಾರ್ಜುನ ಶೆಟ್ಟಿ,ಡಾ.ಹರ್ಷವರ್ಧನ, ಡಾ.ಮಾಜಿದ್ ದಾಗಿ, ಡಾ.ಆನಂದ ಸಿದ್ದಾಮಣಿ ,ಸೇರಿದಂತೆ ಸಂಘಟನೆಯ ಮುಖಂಡರಾದ ಲಿಂಗರಾಜ ಸಿರಗಾಪೂರ, ಶರಣು ಐ.ಟಿ,ಮುತ್ತಣ್ಣ ನಾಡಗೇರಿ,ಮಂಜುನಾಥ ನಾಲವರಕರ್, ಸಚಿನ್ ಫರತಾಬಾದ, ಗೋಪಾಲ ನಾಟಿಕರ್, ದತ್ತು ಶಿವಲಿಂಗಪ್ಪ ಭಂಡಕ, ಮನೋಹರ್ ಬೀರನೋರ, ಎಮ್ ಬಿ ನಿಂಗಪ್ಪಾ ಭಾ‌ಸಗಿ,ರವಿ ದೇಗಾವ, ಆನಂದ ಕಪನೂರ,ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು, ಯುವ ವಿದ್ಯಾರ್ಥಿಗಳ ಮುಖಂಡರು ಮಾತ್ನಾಡಿದರು.

ಈ ಬೃಹತ್ ಪರ್ತಭಟನಾ ಹೋರಾಟದಲ್ಲಿ ಆಯಾ ಕ್ಷೇತ್ರದ ಗಣ್ಯರು ಸೇರಿದಂತೆ ಸಹಸ್ರಾರು ವಿಧ್ಯಾರ್ಥಿಗಳು ಮೊದಲು ಮಾನವ ಸರಪಳಿ ಹೋರಾಟ ನಂತರ ಭಾರಿ ಪ್ರತಿಭಟನೆ ನಡೆಸಿದರು ಸುಮಾರು ಎರಡು ಘಂಟೆಗಳ ಕಾಲ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಹೋರಾಟದ ಜನದಟ್ಟಣೆಯ ಕಾರಣ ಚಲನವಲನ ಸ್ಥಗಿತವಾಗಿತ್ತು , ಸಮಿತಿಯ ನಿಗದಿತ ನಿರ್ಣಯದಂತೆ ಪಟೇಲ್ ವೃತ್ತದಲ್ಲಿಯೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಬೃಹತ್ ಪ್ರತಿಭಟನೆಯಲ್ಲಿ ಪ್ರಮುಖರಾದ ಅಶೋಕ ಗುರೂಜಿ,ಬೀಮಶೆಟ್ಟಿ ಮುಕ್ಕಾ, ಬಾಬುರಾವ್ ಗಂವಾರ್,ರಾಜು ಜೈನ, ಗಿರೀಶ್ ಗೌಡ ಇನಾಮದಾರ, ಭೀಮರಾಯ ಕಂದಳ್ಳಿ,ಮಾಲಾ ಕಣ್ಣಿ, ಅಸ್ಲಂ ಚೌಂಗೆ, ಸಾಬಿರ್ ಅಲಿ,ಬಾಬಾ ಫಕ್ರುದ್ದೀನ್,ಜೈರಾಜ ಕಿಣಗೀಕರ್, ಆನಂದ ದೇಶಪಾಂಡೆ, ಡಾ.ಚಿ.ಸಿ.ನಿಂಗಣ್ಣ, ಸೇರಿದಂತೆ ಆಯಾ ಕ್ಷೇತ್ರದ ನೂರಾರು ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here