ಮಕ್ಕಳ ಮಧ್ಯೆ ಜನ್ಮದಿನ ಆಚರಿಸಿಕೊಂಡ ಸ್ವಾಮೀಜಿ: ಸರ್ಕಾರಿ ಶಾಲೆ ಉಳಿಸಲು ಶ್ರಮಿಸಲು ಕರೆ

0
11

ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ 44ನೇ ಹುಟ್ಟುಹಬ್ಬದ ನಿಮಿತ್ಯ ಶನಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಣೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಲತಾ ಹಾಗೂ ಗ್ರಾಮದ ಮುಖಂಡರು ಪೂಜ್ಯರಿಗೆ ಶಾಲು ಹೊದಿಸಿ ಸನ್ಮಾನ ಮಾಡುವ ಮೂಲಕ ಗುರುಗಳ ಆಶೀರ್ವಾದ ಪಡೆದುಕೊಂಡರು.

ನಂತರ ನಡೆದ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮುನೀಂದ್ರ ಶಿವಾಚಾರ್ಯ ಸ್ವಾಮಿಗಳು, ನಾವು ದುಡಿದು ಗಳಿಸಿಟ್ಟ ಆಸ್ತಿ ಅಂತಸ್ತನ್ನು ಯಾರುಬೇಕಾದರೂ ಕಸಿದುಕೊಳ್ಳಬಹುದು. ಆದರೆ ಗುರುಗಳಿಂದ ಪಡೆದುಕೊಂಡ ಅಕ್ಷರ ವಿದ್ಯೆ ಮಾತ್ರ ಯಾರೂ ಕಸಿದುಕೊಳ್ಳಲು ಸಾದ್ಯವಿಲ್ಲ. ಇಂದು ಬಹುತೇಕ ಬಡ ಕುಟುಂಬದ ಮಕ್ಕಳಿಗಾಗಿಯೇ ಮೀಸಲಿರುವ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು.

Contact Your\'s Advertisement; 9902492681

ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಹಲವು ಕೊರತೆಗಳು ಕಾಡುತ್ತಿದ್ದವು. ಅಂಥದ್ದರಲ್ಲಿ ಓದಿ ಸಾಧಕರಾದವರು ಅನೇಕ ಜನರಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಬಹಳ ಧೈರ್ಯ ಇರುತ್ತದೆ ಎಂಬುದು ಜನಸಾಮಾನ್ಯರ ಮಾತು. ಅದರಲ್ಲಿ ಸತ್ಯ ಅಡಗಿದೆ. ಪೆÇೀಷಕರು ಖಾಸಗಿ ಶಾಲೆಯ ವ್ಯಾಮೋಹದಿಂದ ಹೊರಬಂದು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಶೈಕ್ಷಣಿಕ ಸಮಸ್ಯೆಗಳು ಕೊರತೆಗಳು ಕಂಡುಬಂದರೆ ಈಡೇರಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕು. ಒಟ್ಟಾರೆ ಸರ್ಕಾರಿ ಶಾಲೆಗಳನ್ನು ಉಳಿಸುವ ಬೆಳೆಸುವ ಕಾರ್ಯ ನಡೆಯಬೇಕು ಎಂದರು.

ಶ್ರೀಮಡಿವಾಳಯ್ಯ ಶಾಸ್ತ್ರೀ ಜೇರಟಗಿ, ಬಸಯ್ಯ ಸ್ವಾಮೀಜಿ ವಾಗ್ದರ್ಗಿ, ರಾಚಯ್ಯ ಶಾಸ್ತ್ರೀ, ಶಿವಶರಣಪ್ಪ ಪೂಜಾರಿ ಹೂಗಾರ, ಮಲ್ಲಿಕಾರ್ಜುನ ಹೂಗಾರ, ರಾಘವೇಂದ್ರ ಅಲ್ಲಿಪೂರ, ಯಶವಂತ ಬಡಿಗೇರ, ಸಿದ್ದು ಮುಗುಟಿ, ಮಲ್ಲಿಕಾರ್ಜುನ ಹಣಿಕೇರಿ, ದೇವಿಂದ್ರ ನಾಚವಾರ, ಚೌಡಪ್ಪ ಗಂಜಿ, ಭಾಗಣ್ಣ ಹೊನಗುಂಟಿ, ಮಲ್ಲಿಕಾರ್ಜುನ ಭಜಂತ್ರಿ, ಮಹಾದೇವಯ್ಯ ಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಕಟ್ಟಿಮನಿ, ಶಿಕ್ಷಕರಾದ ತಾಯಮ್ಮ, ಜಯಶೀಲಾ ಭಾಸ್ಕರ್, ಲತಾ ಡಿಎನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ರಾಘವೇಂದ್ರ ಅಲ್ಲಿಪೂರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here