ಬೀಜ ರಸಗೊಬ್ಬರ ಕೃತಕ ಅಭಾವಕ್ಕೆ ಕಡಿವಾಣ ಹಾಕಿ: ಮಲ್ಲಿಕಾರ್ಜುನ ಸತ್ಯಂಪೇಟೆ

0
18

ಸುರಪುರ:ಈಗಾಗಲೇ ರೈತರು ಬರಗಾಲ ಮತ್ತು ರೈತರ ಬೇಜವಬ್ದಾರಿತನ ದಿಂದ ಕಂಗೆಟ್ಟಿದ್ದು ಇಂತಹ ಸಂದರ್ಭದಲ್ಲಿ ಬೀಜ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಲು ಮುಂದಾಗಿದ್ದು ಅಧಿಕಾರಿಗಳು ಎಚ್ಚೆತ್ತುಕೊಂಡ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ,ಅಧಿಕಾರಿಗಳ ಬೇಜವಬ್ದಾರಿತನ ದಿಂದ ರೈತರಿಗೆ ಬರ ಪರಿಹಾರ ಸರಿಯಾಗಿ ತಲುಪಿಲ್ಲ,ರೈತ ಸಂಕಷ್ಟದಲ್ಲಿರುವಾಗ ಮಳೆ ಈಗ ಆರಂಭಗೊಂಡಿದೆ,ರೈತ ಭೂಮಿ ಹದಗೊಳಿಸಿ ಬಿತ್ತಣಿಕೆಗೆ ಅಣಿಯಾಗುತ್ತಿದ್ದಾನೆ,ಈಗ ರೈತರಿಗೆ ಬೀಜ ಗೊಬ್ಬರದ ಅಗತ್ಯವಿದೆ,ಇಂತಹ ಸಂದರ್ಭದಲ್ಲಿ ಬೀಜ ಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ತಮ್ಮಲ್ಲಿರುವಿದನ್ನೆ ತೆಗೆದುಕೊಳ್ಳಬೇಕು ಎಂದರು.

Contact Your\'s Advertisement; 9902492681

ಅಧಿಕಾರಿಗಳು ಇದನ್ನು ಗಮನಿಸದೆ ಸೋಂಬೇರಿತನ ಪ್ರದರ್ಶಿಸುತ್ತಿದ್ಧಾರೆ.ಇದರಿಂದ ರೈತ ಹೊರ ಮಾರುಕಟ್ಟೆ ನಂಬಿ ಮಾರಾಟಗಾರರ ಕೈಗೊಂಬೆಯಾಗುವಂತಾಗಿ ರೈತ ದಿವಾಳಿಯಾಗುತ್ತಿದ್ದಾನೆ.

ಮುಂದೆ ರೈತರು ಕೃಷಿಯನ್ನೆ ಬಿಟ್ಟು ವಲಸೆ ಹೋಗಬೇಕಾದ ಸ್ಥಿತಿ ಬರಲಿದೆ,ಕೂಡಲೇ ಅಧಿಕಾರಿಗಳು ಎಚ್ಚೆತ್ತು ರೈತರಿಗೆ ಬೇಕಾದ ಬೀಜ ಗೊಬ್ಬರ ಇಲಾಖೆಯಿಂದ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ಮಾರಾಟಗಾರರು ಕೃಕತ ಅಭಾವ ಸೃಷ್ಟಿಸುವುದಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here