ಕುವೈತ್ ನಲ್ಲಿ ಮೃತಪಟ್ಟ ಕಲಬುರಗಿ ಮೂಲದ ವ್ಯಕ್ತಿಯ ಪಾರ್ಥಿವ ಶರೀರ ತರಲು ಎಲ್ಲಾ ವ್ಯವಸ್ಥೆ: ಪ್ರಿಯಾಂಕ್ ಖರ್ಗೆ

0
23

ಕಲಬುರಗಿ: ದಕ್ಷಿಣ ಕುವೈತ್ ನ ಮಂಗಪ್ ಎನ್ನುವ ವಸತಿ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮಡಿದ 40 ಜನ ಭಾರತೀಯರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ ( 42) ಎನ್ನುವವರೂ ಕೂಡಾ ಸೇರಿದ್ದು ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಅಗ್ನಿ ಅನಾಹುತದಲ್ಲಿ ಮಡಿದ ಭಾರತೀಯರ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು ಅವರಲ್ಲಿ ಕಲಬುರಗಿ ಜಿಲ್ಲೆಯವರೊಬ್ಬರು ಅದೇ ಘಟನೆಯಲ್ಲಿ ಮಡಿದಿದ್ದು ದುರಾದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗವರಿಗೆ ನಾನು ಸಾಂತ್ವನ ಹೇಳಬಯಸುತ್ತೇನೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕುಟುಂಬದವರೊಂದಿಗೆ ಇದ್ದು ನಾನು ಕೂಡಾ ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮೃತರ ಪಾರ್ಥಿವ ಶರೀರವನ್ನು ಕುವೈತ್ ನಿಂದ ಕೊಚ್ಚಿಗೆ ತರಿಸುವ ವ್ಯವಸ್ಥೆ ಮಾಡಲಾಗಿದೆ. ಪಾರ್ಥಿವ ಶರೀರವನ್ನು ಕೊಚ್ಚಿಯಲ್ಲಿ ತೆಗೆದುಕೊಳ್ಳಲು ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಪಿಐ ಒಬ್ಬರನ್ನು ಕಲಬುರಗಿ ಯಿಂದ‌‌ ಕೊಚ್ಚಿಗೆ ಕಳಿಸಲಾಗುತ್ತಿದೆ. ಅಲ್ಲಿಂದ ವಿಮಾನದ ಮೂಲಕ ಹೈದರಾಬಾದ್ ಗೆ ತರಲಾಗುತ್ತಿದ್ದು, ಹೈದರಾಬಾದ್ ನಿಂದ ವಾಹನದಲ್ಲಿ ಸರಸಂಬಾಕ್ಕೆ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here