ವಸತಿ ನಿಲಯಗಳ ಸಮರ್ಪಕ ನಿರ್ವಹಣೆಗೆ ಕರೆ

0
18

ಕಲಬುರಗಿ: ಬಡ,ದಲಿತ ಹಿಂದುಳಿದ ಸಮುದಾಯದಿಂದ ಬರುವ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಭವಿಷ್ಯ ರೂಪಿಸಲು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರಾದ ಡಾ.ದೇವರಾಜ ಕರೆ ನೀಡಿದರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಕಲಬುರಗಿ ವಿಭಾಗ ಮಟ್ಟದ ವಸತಿ ನಿಲಯಗಳ ನಿಲಯಪಾಲಕರಿಗೆ ಹಮ್ಮಿಕೊಂಡಿದ್ದ ಎಚ್.ಎಂ.ಐ.ಎಸ್ ತಂತ್ರಾಂಶ ಅಳವಡಿಸುವ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಅನೇಕ ಬಡ ಮಕ್ಕಳು ವಸತಿ ನಿಲಯಗಳಿಗೆ ಬರುತ್ತಿದ್ದು ಅವರಿಗೆ
ಗುಣಮಟ್ಟದ ಆಹಾರ ನೀಡುವ ಮೂಲಕ ಅವರಲ್ಲಿ ಶಿಸ್ತು, ಸ್ವಚ್ಚತೆ ಮೂಡಿಸಿ ಕಲಿಕೆಗೆ ಪ್ರೋತ್ಸಾಹ ನೀಡಬೇಕೆಂದು ತಿಳಿ ಹೇಳಿದರು.

Contact Your\'s Advertisement; 9902492681

ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ,ಸುರಕ್ಷತಾ ಸಮಿತಿ,ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಪಠ್ಯದ ಜೊತೆಗೆ ವಸತಿ ನಿಲಯಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿ ಅಭ್ಯಾಸಕ್ಕೆ ಪೂರಕಾವದ ವಾತಾವರಣ ಕಲ್ಪಿಸಬೇಕೆಂದು ಕಿವಿ ಮಾತು ಹೇಳಿದರು.

ವೇದಿಕೆಯ ಮೇಲೆ ಜಾವೀದ್ ಕಾರಂಗಿ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಲಬುರಗಿ , ಕೇಂದ್ರ ಕಚೇರಿಯ ಉಪ ನಿರ್ದೇಶಕರಾದ ಪುರುಷೋತ್ತಮ, ಕಲಬುರಗಿ ವಿಭಾಗದ ವಿವಿಧ ಜಿಲ್ಲೆಗಳ ಉಪನಿರ್ದೇಕರಾದ ಪಿ.ಸಿಂಧು,ಸರೋಜ,ಮಹೇಶ ಪೋದ್ದಾರ ಉಪಸ್ಥಿತರಿದ್ದರು.

ಗಿರೀಶ್ ರಂಜೋಳಕರ್,ವಿಜಯಕುಮಾರ ಫುಲಾರೆ, ಚೇತನ ಗುರಿಕಾರ,ಅಶೋಕ ನಾಯಕ,ರಾಮಚಂದ್ರ ಗೋಳಾ,ಪ್ರಭುಲಿಂಗ ವಾಲಿ,ಮೋನಮ್ಮ ಸುತಾರ,ವಿಜಯಲಕ್ಷ್ಮಿ ಹೊಳಕರ್ ಸೇರಿದಂತೆ ವಿಭಾಗದ ವಿವಿಧ ತಾಲ್ಲೂಕುಗಳ ಸಹಾಯಕ ನಿರ್ದೇಶಕರು ಹಾಗೂ ನಿಲಯಪಾಲಕರು ಪಾಲ್ಗೊಂಡಿದ್ದರು.

ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಡಾ.ರಾಜಶೇಖ ಮಾಂಗ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here