ಕಲಬುರಗಿ: ನಗರದ ಖ್ವಾಜಾ ಕಾಲೋನಿ ಬಡಾವಣೆಯ ಕಲಕತ್ತಾ ಕಲ್ಯಾಣ ಮಂಟಪದಲ್ಲಿ ದಿ. ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ಎರಡು ದಿನಗಳ ವರೆಗೆ ಉಚಿತ ರೇಷನ್ ಕಾರ್ಡ್ ಹಾಗೂ ಗುರುತಿನ ಚೀಟಿ ತಯಾರಿಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಉತ್ತರ ಘಟಕದ ಸದಸ್ಯ ಸಾದತ್ ಹುಸೇನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಕಾರ್ಯಕ್ರಮದ ಲಾಭ ಪಡೆದರು.