ವಾಡಿ; ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಹಾಗು ಮೋರಾರ್ಜಿ ದೇಸಾಯಿ ವಸತಿ ಶಾಲೆ ವಾಡಿ ಆಯುಷ್ ಇಲಾಖೆ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಶಿಕ್ಷಕ ವೀರಣ್ಣ ಯಾರಿ ದ್ವೀತಿಯ ಯೋಗ ತರಬೇತಿ ನೀಡಿದರು.
ಈ ವೇಳೆ ಆಯುಷ್ ಇಲಾಖೆಯ ಡಾ. ಆನಂದ್ ಮಾತನಾಡಿ ಇಂದು ಮಕ್ಕಳು, ಚಿಕ್ಕ ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ಒತ್ತಡದಲ್ಲಿ ಓದಿ ಚೆನ್ನಾಗಿ ಕಲಿತು ವಿದ್ಯೆ ಕಲಿಯುವುದರಲ್ಲಿ ಯಶಸ್ಸು ಗಳಿಸುತ್ತಿದ್ದಾರೆ, ಮುಂದೆ ನೌಕರಿಯೂ ಸಿಗುತ್ತದೆ. ಆದರೆ, ಆ ಹೊತ್ತಿಗೆ ಒತ್ತಡದ ಕಾರಣಕ್ಕೆ ದೇಹಾರೋಗ್ಯವೂ ಕೆಟ್ಟು ಹೋಗಿರುತ್ತದೆ.
ಆರೋಗ್ಯ ಕಾಪಾಡಿಕೊಳ್ಳುತ್ತಲೇ ಬದುಕಿನಲ್ಲೂ ಯಶಸ್ಸು ಗಳಿಸಲು ಯೋಗ, ಧ್ಯಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತರಬೇತಿ ನೀಡಬೇಕಿದೆ ಎಂದರು. ಪೌಷ್ಟಿಕಾಂಶ ಆಹಾರಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ನಾವು ಸೇವಿಸುವ ಆಹಾರ ಸಮತೋಲನ ಆಹಾರವಾಗಿರಬೇಕು, ಹೊರಗಡೆಯ ತಿಂಡಿ ತಿನಿಸುಗಳಿಗೆ ಮಾರು ಹೋಗಬಾರದು ಎಂದು ತಿಳಿಸಿದರು.
ಡಾ. ಬಿಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಉದಯ ಧರಣ್ಣನವರ ಎಲ್ಲಾ ಭಾಗ್ಯಗಳಿಗಿಂತಲೂ ಮುಖ್ಯವಾಗಿ ಆರೋಗ್ಯ ಭಾಗ್ಯ ಬಹಳಷ್ಟು ಮುಖ್ಯವಾಗಿದೆ ಉತ್ತಮ ಆರೋಗ್ಯಕ್ಕೆ ಯೋಗವು ಬಹಳಷ್ಟು ಸಹಕಾರಿಯಾಗಿದೆ,ಯೋಗ ಮಾಡುವುದರ ಮೂಲಕ ರೋಗ ಮುಕ್ತರಾಗಬೇಕು ಯೋಗವು ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.
ಯೋಗ ಶಿಕ್ಷಕ ವೀರಣ್ಣ ಯಾರಿ ಯೋಗ ಮಾಡುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗಿ ಆಯುಷ್ಯವೃದ್ಧಿ ಆಗಲು ಸಹಕಾರಿಯಾಗಿದೆ ದಿನನಿತ್ಯ ಯೋಗ ಅಭ್ಯಾಸದಿಂದ ಮನುಷ್ಯನ ಮೆದುಳು ಚುರುಕಾಗಿ ಬುದ್ಧಿಶಕ್ತಿ ಚುರುಕಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಿವಿಧ ಆಸನಗಳನ್ನು ಮಾಡಿಸಿ, ಪ್ರಾಣಾಯಾಮ,ಆಸನಗಳ ಮಹತ್ವವನ್ನು ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಶ್ರೀನಾಥ್ ಇರಗೊಂಡ ಗೀತಾ ಬಡಿಗೇರ, ಶ್ರೀದೇವಿ ಮತ್ತು ಆಯುಷ್ ಇಲಾಖೆಯ ರೇವಣಸಿದ್ದಪ್ಪ,ಸರ್ವೇಶ್, ಯೋಗಾಸಕ್ತರಾದ ಕಾಶೀನಾಥ್ ಶೇಟಗಾರ್ ಪಾಲ್ಗೊಂಡಿದ್ದರು.