ಸಂಸ್ಕಾರದ ವ್ಯಕ್ತಿ ಜಗತ್ತನ್ನೇ ಗೆಲ್ಲಬಹುದು

0
17

ಕಲಬುರಗಿ; ಸಂಸ್ಕಾರವಿದ್ದ ಮನುಷ್ಯ ಜಗತ್ತನ್ನೇ ಗೆಲ್ಲಬಹುದು ಆದರೆ ಅಹಂಕಾರ ಬಂದಾಗ ಗೆದ್ದ ಜಗತ್ತನ್ನೇ ಕ್ಷಣದಲ್ಲಿ ಕಳೆದುಕೊಳ್ಳಬಹುದು ಎಂದು ಕಮಲಾನಗರ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ನಾಗರಾಜ ಹಿರೇಮನಿ ಹೇಳಿದರು.

ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 215ನೇ ವಾರದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ ಮನುಷ್ಯನಿಗೆ ಅಕ್ಷರ ಜ್ಞಾನ ಕಡಿಮೆಯಾದರು, ಚಿಂತೆ ಇಲ್ಲ, ಸಂಸ್ಕಾರ ಕೊರತೆಯಾದರೆ ಸಮಾಜಕ್ಕೆ ಕಂಟಕವಾಗುತ್ತಾನೆ. ಸಂಸ್ಕಾರದ ವ್ಯಕ್ತಿ ಸಮೃದ್ಧ ಸಮಾಜದ ಅಡಿಪಾಯವಾಗುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ನ್ಯಾಯವಾದಿ ಹಣಮಂತರಾಯ ಅಟ್ಟೂರ ಪ್ರಾಸ್ತವಿಕವಾಗಿ ಮಾತನಾಡುತ್ತಾ ಶಿವಾನುಭವಗೋಷ್ಠಿ ಕಾರ್ಯಕ್ರಮದಿಂದ ಇಡೀ ಸಮಾಜವೇ ಬದಲಾವಣೆ ಆಗದಿದ್ದರೂ, ಶರಣರ, ಸಂತರ ವಿಚಾರಗಳು ಜನರಿಗೆ ತಲುಪಿಸುವುದು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರತಿಭಾವಂತರಿಗೆ ವೇದಿಕೆ ನೀಡುವುದು, ಜೊತೆಗೆ ನಿಜವಾದ ಸಮಾಜ ಸೇವಕರಿಗೆ ಸಾಧಕರಿಗೆ ಸಮಾಜಕ್ಕೆ ಪರಿಚಯಿಸುವುದು. ಆಧ್ಯಾತ್ಮಿಕ ಚಿಂತನೆ ನಿರಂತರವಾಗಿ ಸಾಗಲೆಂಬ ಸಂಕಲ್ಪದೊಂದಿಗೆ ಶ್ರೀಮಠದ ಪೀಠಾಧಿಪತಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪ್ರತಿ ಸೋಮವಾರ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಳಗಿ ಕಂದಾಯ ನಿರೀಕ್ಷಕರಾದ ಮಂಜುನಾಥ ಮಹಾರುದ್ರ ಆಗಮಿಸಿದರು. ಕಾರ್ಯಕ್ರಮದ ನೇತೃತ್ವ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಗುರುಪಾದಲಿಂಗ ಮಹಾ ಶಿವಯೋಗಿಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ಚನ್ನವೀರ ಮಹಿಳಾ ಭಜನಾ ಸಂಘದ ವತಿಯಿಂದ ಪೂಜ್ಯರಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕವಿತಾ ದೇಗಾಂವ, ಶರಣಬಸಪ್ಪ ಪಾಟೀಲ ವರನಾಳ, ಸಿದ್ದಣ್ಣ ಬಿರೆದಾರ ವಾಡಿ, ವಸಂತ ಜಾದವ, ಗುರುರಾಜ ಹಸರ ಗುಂಡಗಿ, ಶಾಂತು ಕಲಬುರಗಿ, ಮಾಣಿಕ ಗುತ್ತೇದಾರ, ಶಿವಕುಮಾರ ಸಾವಳಗಿ, ಪ್ರಕಾಶ ಬಿರಾದಾರ ವಾಡಿ ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here