ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಜನ್ಮ ದಿನ:ಶ್ರೀಗಿರಿ ಮಠದಲ್ಲಿ ಭಕ್ತರಿಗೆ ಸಸಿ ವಿತರಣೆ

0
37

ಸುರಪುರ: ತಾಲೂಕಿನ ಲಕ್ಷ್ಮೀಪುರ-ಬಿಜಾಸಪುರ ಗ್ರಾಮಗಳ ಮಾರ್ಗ ಮಧ್ಯದ ಶ್ರೀಗಿರಿ ಮಠದಲ್ಲಿ ಪೀಠಾಧಿಪತಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ 38ನೇ ಜನ್ಮದಿನದ ನಿಮಿತ್ತ ಮಠದ ಆವರಣದಲ್ಲಿ ಎಲ್ಲರಿಗು ಸಸಿಗಳ ವಿತರಿಸಿ ಪರಿಸರ ಪ್ರೇಮ ಮೆರೆಯಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರುಕ್ಮಾಪುರ ಹಿರೇಮಠದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಇರುವುದೊಂದೇ ಭೂಮಿ, ಪರಿಸರವೇ ನಮ್ಮೆಲ್ಲರ ಆಸ್ತಿ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕೋಣ. ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು,ನಮ್ಮ ಭೂಮಿ ನಮ್ಮ ಭವಿಷ್ಯವಾಗಿದ್ದು ಅದನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.

Contact Your\'s Advertisement; 9902492681

ಪರಿಸರ ನಾಶದಿಂದ ಇಂದು ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ನಾವು ಸಸ್ಯ ಪರಿಸರ ಬೆಳೆಸಿದರೆ ಮುಂದೊಂದು ದಿನ ಗಿಡ, ಮರಗಳು ನಮ್ಮನ್ನು ಉಳಿಸುತ್ತವೆ. ಪ್ರತಿ ವ್ಯಕ್ತಿ ಸಸಿ ನೆಡುವ ಮೂಲಕ ಪರಿಸರ ಪ್ರಗತಿಗೆ ಒತ್ತು ಕೊಡಬೇಕು. ಪ್ರತಿಯೊಬ್ಬರು ದೈನಂದಿನ ಕಾರ್ಯಗಳು ಮಾಡಿದಂತೆ ಪರಿಸರ ಉಳಿವಿಗೆ ಕಾಳಜಿ ವಹಿಸಿ ಹಸಿರು ಬೆಳಸಿ ಜೀವ ಸಂಕುಲ ಉಳಿಸಬೇಕು ಎಂದು ಸಲಹೆ ನೀಡಿದರು.

ಮಠದ ಪೂಜ್ಯರ ಜನ್ಮದಿನದ ನಿಮಿತ್ತ ಸಸಿ ನೀಡುವ ಮೂಲಕ ಭಕ್ತರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಮತ್ತು ಇದು ಪ್ರಶಂಸನೀಯ. ಕಳೆದ ವರ್ಷವೂ ಪೂಜ್ಯರ ಜನ್ಮದಿನಾಚರಣೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಜನರಿಗೆ ರಕ್ತದಾನದ ಮಹತ್ವ ತಿಳಿಸಲಾಗಿತ್ತು. ಈ ಬಾರಿ ಪರಿಸರದ ಜಾಗೃತಿಗೈದಿರುವುದು ಶ್ಲಾಘನೀಯ. ಪೂಜ್ಯರ ಸಾಮಾಜಿಕ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ಸಗರದ ಒಕ್ಕಲಿಗರ ಹಿರೇಮಠ ಸಂಸ್ಥಾನದ ಮರುಳ ಮಹಾಂತ ಶಿವಾಚಾರ್ಯರು, ನೀಲಗಲ್ಲದ ರೇಣುಕಾ ಶಾಂತಮಲ್ಲ ಶಿವಾಚಾರ್ಯರು, ಇಟಗಾ ಬಸವಲಿಂಗೇಶ್ವರ ಸಂಸ್ಥಾನದ ಚಂದ್ರಶೇಖರ ದೇವರು, ಹಿಮಾಲಯ್ಯ ಮುತ್ತ್ಯಾ,ಪ್ರಕಾಶ ಅಂಗಡಿ ಕನ್ನೆಳ್ಳಿ,ಮಲ್ಲು ಬಾದ್ಯಾಪುರ,ಮಲ್ಲಣಗೌಡ ಹಗರಟಗಿ,ಪ್ರದೀಪ ಕದರಾಪುರ,ಶಿವರುದ್ರ ಉಳ್ಳಿ,ರವಿಗೌಡ ಹೆಮನೂರ,ಶರಣು ನಾಯಕ ಬೈರಿಮಡ್ಡಿ ಸೇರಿ ವಿವಿಧ ಮಠಾಧೀಶರು, ನಗರ ಸೇರಿ ನಾನಾ ಗ್ರಾಮಗಳ ನೂರಾರು ಭಕ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here