ವಿಧಾನ ಪರಿಷತ್ ಸದಸ್ಯ ನಮೋಶಿ ಸುದ್ದಿಗೋಷ್ಠಿ: 25 ರಂದು ಸಂವಾದ

0
41

ಕಲಬುರಗಿ: ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು ತುರ್ತು ಪರಿಸ್ಥಿತಿಯ ಕರಾಳ ದಿನದ ಹಿಂದಿನ ಸತ್ಯ ಘಟನೆಗಳನ್ನು ಅರಿಯಲು, ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತು ಇದೇ ಜೂನ್ ೨೫ರಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಂಎಲ್ಸಿ ಶಶೀಲ್ ನಮೋಶಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೩ ಗಂಟೆಗೆ ನಗರದ ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರು ಹಾಗೂ ದಲಿತ ಮುಖಂಡರುಗಳು ಕರೆಸಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ವಿವರಿಸಿದರು.

Contact Your\'s Advertisement; 9902492681

ಅಂದು ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾಜಿ ಸಚಿವ ಎನ್ ಮಹೇಶ್ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ಖ್ಯಾತ ನ್ಯಾಯವಾದಿ ಶ್ರೀಧರ ಪ್ರಭು ಉಪಸ್ಥಿತರಿಲಿದ್ದು, ಕಲಬುರಗಿಯ ಖ್ಯಾತ ನ್ಯಾಯವಾದಿ ಬಸವರಾಜು ಚಿಂಚೋಳಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅವ್ವಣ್ಣಾ ಮ್ಯಾಕೇರಿ, ಬಾಬುರಾವ್ ಚೌಹಾಣ್, ಅಂಬಾರಾಯ್ ಅಷ್ಟಗಿ, ಧರ್ಮಣ್ಣ ದೊಡ್ಡಮನಿ, ಬಸವರಾಜ ಬೆಣ್ಣೂರ್, ರಾಘವೇಂದ್ರ ಕುಲಕರ್ಣಿ, ರಾಜು ವಾಡೇಕರ್, ರಾಜು ನಾಗೇನಹಳ್ಳಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here