ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮಕ್ಕೆ ಬೆಳಿಗ್ಗೆ ಬಸ್ ಓಡಿಸಲು ಆಗ್ರಹಿಸಿ ಗ್ರಾಮಸ್ಥರು ಶ್ರೀ ಮಹಾತ್ಮಾ ಗಾಂಧೀಜಿ ರೈತ ಒಕ್ಕೂಟದ ಮೂಲಕ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ,ಜಾಲಿಬೆಂಚಿ ಗ್ರಾಮಕ್ಕೆ ಬೆಳಿಗ್ಗೆ 7:30ಕ್ಕೆ ಒಂದು ಬಸ್ ಬರುತ್ತಿದ್ದು ಅದು ಮಾವಿನಮಟ್ಟಿ ಗ್ರಾಮಕ್ಕೆ ಹೋಗಿ ಬರುವುದರಿಂದ ಗ್ರಾಮದ ಮಕ್ಕಳು ಸುರಪುರಕ್ಕೆ ಶಾಲಾ ಕಾಲೇಜಿಗೆ ಬರಲು ಆಸನ ಇಲ್ಲದೆ ದಿನಾಲು ಮಕ್ಕಳು ಶಿಕ್ಷಣ ದಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಗ್ರಾಮಕ್ಕೆ ಬೆಳಿಗ್ಗೆ ಒಂದು ಬಸ್ ಓಡಿಸಬೇಕು ಮತ್ತು ಜಾಲಿಬೆಂಚಿ ಕ್ರಾಸ್ ಮೂಲಕ ಹೋಗುವ ಬಾಗಲಕೋಟೆ,ವಿಜಯಪುರ ಹಾಗೂ ಕನ್ನೆಳ್ಳಿ,ಬೈಚಬಾಳ,ಕೂಡಲಗಿ ಗ್ರಾಮಗಳಿಗೆ ಹೋಗುವ ಎಲ್ಲಾ ಬಸ್‍ಗಳು ಜಾಲಿಬೆಂಚಿ ಗ್ರಾಮದೊಳಗೆ ವಾಯಾ ಮಾಡಿಕೊಂಡು ಹೋಗಲು ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಗ್ರಾಮದ ಜನರು ಕುಂಬಾರಪೇಟ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್,ಮಲ್ಲಣ್ಣ ಸಾಹುಕಾರ,ಅಂಬ್ರೇಶ ಮರಾಠ,ಇಸ್ಮಾಯಿಲ್ ಉಸ್ತಾದ,ಮಾಜಿ.ಗ್ರಾ.ಪಂ ಅಧ್ಯಕ್ಷ ವಿಶ್ವನಾಥರಡ್ಡಿ ಕಾಮತ್,ದೇವಿಂದ್ರಪ್ಪ ನಾಯಕ ಮಲ್ಲಿಬಾವಿ,ಭೀಮಣ್ಣ ಪೂಜಾರಿ ನಾಗನಟಗಿ ,ರವಿ ಕಾಮತ್,ಬಸವರಾಜ ಕಟ್ಟಿಮನಿ,ಮಲ್ಲಿಕಾರ್ಜುನ ಬಡಿಗೇರ,ಗುಲಾಂ ಹುಸೇನ್ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.