ಸುರಪುರ: ತಾಲೂಕ ಕುಂಬಾರ ಸಂಘದ ವತಿಯಿಂದ ನೂತನ ಶಾಸಕ ರಾಜಾ ವೇಣುಗೊಪಾಲ ನಾಯಕಗೆ ಸನ್ಮಾನಿಸಿ ಗೌರವಿಸಲಾಗಿದೆ.ನಗರದ ಶಾಸಕರ ಗೃಹ ಕಚೇರಿಯಲ್ಲಿ ಸಂಘದ ಅನೇಕ ಮುಖಂಡರು ಆಗಮಿಸಿ ಸನ್ಮಾನಿಸಿ,ನಂತರ ನಗರದ ರಂಗಂಪೇಟೆಯ ಮಂಡಳ ಬಟ್ಟಿ ಬಳಿಯಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಕುಂಬಾರ ಭವನದ ಉದ್ಘಾಟನೆಯನ್ನು ನೇರವೇರಿಸುವಂತೆ ಮನವಿ ಮಾಡಿಕೊಂಡರು.ಸಂಘದ ಮನವಿಗೆ ಸ್ಪಂದಿಸಿದ ಶಾಸಕರು ಶೀಘ್ರದಲ್ಲಿಯೇ ಉದ್ಘಾಟನೆ ಕಾರ್ಯಕ್ರಮ ನಡೆಸೋಣ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕ ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ,ಮುಖಂಡರಾದ ದೊಡ್ಡ ವೀರಭದ್ರಪ್ಪ ಕುಂಬಾರ,ದೊಡ್ಡ ಈರಣ್ಣ ಕುಂಬಾರ,ಭೀಮರಾಯ ಕುಂಬಾರ ಕುಂಬಾರಪೇಟ,ಅರಮೇಶ ಜಾಲಹಳ್ಳಿ,ಸೂಗಪ್ಪ ಕುಂಬಾರ,ಅಂಬ್ರೇಶ ಪಾನಶಾಪ್,ನಿಂಗಣ್ಣ ವಡಿಗೇರ,ವೀರಭದ್ರ ಜಾಲಹಳ್ಳಿ,ಶರಣು ಟೈಲರ್ ಸೇರಿದಂತೆ ಅನೇಕರಿದ್ದರು.