ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹವಿದ್ಯಾಲಯ ಹಾಗೂ ಬಸವರಾಜಪ್ಪ ಅಪ್ಪಾ ಪದವಿ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲ್ಲಿಕಾರ್ಜುನ ಸಜ್ಜನ ಓಂಕಾರ ಯೋಗ ಪ್ರತಿಷ್ಠಾನ ರಂಗಂಪೇಟ,ನಾನಗೌಡ ದೇಸಾಯಿ ಪ್ರಾಂಶುಪಾಲರು ಬಸವರಾಜಪ್ಪ ಅಪ್ಪಾ ಪದವಿ ಮಹಾವಿದ್ಯಾಲಯರವರು ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಶಿವಾನಂದ ಹವಶೆಟ್ಟಿ ಪ್ರಾಂಶುಪಾಲರು ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹವಿದ್ಯಾಲಯರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಸಜ್ಜನರವರು ವಿದ್ಯಾರ್ಥಿಳಿಗೆ ಯೋಗಾಸನ ಮಾಡುವ ತರಬೇತಿ ನೀಡಿದರು ಹಾಗೂ ಯೋಗಾಸನದಿಂದಾಗುವ ಪ್ರಯೋಜನೆಗಳನ್ನು ತಿಳಿಸಿದರು. ಪ್ರಾv:Àಕಾಲದಲ್ಲಿ ವಿದ್ಯಾರ್ಥಿಗಳಾದವರು ಬೇಗೆನೆ ಎದ್ದು ವಿವಿಧ ಯೋಗಾಸನದ ಆಯಾಮಗಳನ್ನು ಮಾಡಬೇಕು ಹಾಗೂ ಸೂರ್ಯ ನಮಸ್ಕಾರ ಹೇಗೆ ಮಾಡಬೇಕೆಂದು ಮಕ್ಕಳಿಗೆ ಮಾಡಿ ತೋರಿಸಿದರು.
ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿದರು ಯೋಗಾಸನದಲ್ಲಿ ಬರುವ ವಿವಿಧ ಆಸನಗಳಾದ ತಾಡಾಸನ,ವೃಕ್ಷಾಸನ,ಪಾದಹಸ್ತಾನ, ಅರ್ಧ ಚಕ್ರಾಸಾನ, ತ್ರಿಕೋಣಾಸನ, ಪಾಶ್ರ್ವಕೋನಾಸನ, ನಟರಾಜಸನ, ಪಾಶ್ರ್ವಕಟಿಚಕ್ರಾಸನಗಳನ್ನು ಮಾಡಿಸಿದರು.
ಈ ಎಲ್ಲಾ ಆಸನಗಳು ಮಾಡುವುದರಿಂದ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ ಹಾಗೂ ನಿರಂತರ ಚೈತನ್ಯಶೀಲರಾಗಿ ಇರಲು ಸಾಧ್ಯವಾಗುತ್ತದೆ ಎಂಬ ಹಲವು ಮಹತ್ವದ ವಿಷಯಗಳನ್ನು ತಿಳಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮಹಮ್ಮದ ಮೋಯಿಜ್ ನಿರೂಪಿಸಿದರು, ಶಿವಾನಿ ಅತಿಥಿಗಳ ಪರಿಚಯ ಮಾಡಿದರು, ಸುಪ್ರಿಯಾ ಸ್ವಾಗತಿಸಿದರು,ಶ್ರೇಯಾ ಚಾರು ವಂದಿಸಿದರು.