ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಶ್ಲಾಘನೀಯ 

0
20

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜಾÐನದೀಪ ನೃತ್ಯ ಕಲಾಸಂಸ್ಥೆ ರಿ ವತಿಯಿಂದ ಸಾಂಸ್ಕ್ರತಿಕ ಕಲಾಮಹೋತ್ಸ ಮತ್ತು ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ರವಿವಾರ ರಂದು ಆಯೋಜಿಸಲಾಗಿತ್ತು.

ನಿವೃತ್ತ ಚಿತ್ರಕಲಾ ಶಿಕ್ಷಕ ಕಲ್ಯಾಣಪ್ಪ ಎಸ್ ಹಂಗರಗಿಯವರು ಸಸಿಗೆ ನೀರು ಹಾಕಿ ಉದ್ಘಾಟಿಸಿ ಜಾÐನದೀಪ ನೃತ್ಯ ಕಲಾಸಂಸ್ಥೆಯು ನೃತ್ಯ ಕಲಾವಿದರಿಗೆ ಹಾಗೂ ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಅನಿಲ್ ಸುರವೆಸ್, ಗುಲಬರ್ಗಾ ಡ್ಯಾನ್ಸ್ ಸಂಘ ಅಧಯಕ್ಷ ಅಕ್ಷಯ ಯಂಕಪ್ಪ ,ಜಾವೇದ, ಪಲ್ಲವಿ, ಸಂಗೀತ ಕಲಾವಿದ ಪಂಚಾಕ್ಷರಿ ಕಣವಿ, ನೃತ್ಯ ಕಲಾವಿದೆ ಸೋನು ಎಂ. ಜೆ, ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ಅಧ್ಯಕ್ಷ ಮುತ್ತಣ್ಣ, ನೃತ್ಯ ಕಲಾವಿದೆ ಪ್ರೀತಮ ಜಾÐನದೀಪ ನೃತ್ಯ ಕಲಾಸಂಸ್ಥೆ ಅಧ್ಯಕ್ಷ ಪ್ರೇಮ ಕುಮಾರ ಹಾಗೂ ಕಾರ್ಯದರ್ಶಿ ಶ್ವೇತಾ ಸಿ.ಕೆ ವೇದಿಕೆ ಮೇಲೆ ಇದ್ದರು.

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ಮೂರು ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ನೃತ್ಯ ಪ್ರರ್ದರ್ಶನ ಮಾಡಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಚಿತ್ರಕಲಾವಿದ ಅಭೀಜಿತ, ಕಾರ್ಯಕ್ರಮ ಸಂಚಾಲಕ ಶರಣಬಸಪ್ಪ ಬಮ್ಮನಹಳ್ಳಿ, ಪಾಲಕರು, ನೃತ್ಯ ಅಭಿಮಾನಿಗಳು ಉಪಸ್ಥಿತಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here