ಕಲಾವಿದ ಕಲ್ಪನೆಗಳ ಅಭಿವ್ಯಕ್ತಿಯೇ ಚಿತ್ರಕಲೆ: ಸಂತೋಷ್ ಹೆಗಡೆ

0
47

ಬೆಂಗಳೂರು:ಕಲಾವಿದನ ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಯೆ ಚಿತ್ರಕಲೆ,ಹಾಗೂ ಸಾಮಾನ್ಯವಾಗಿ ಒಬ್ಬ ಕಲಾವಿದ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಯೋಚನೆ ಮತ್ತು ಭಾವನೆಗಳು ಉತ್ತೇಜಿಸಿದಂತಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗಡೆ ಹೇಳಿದರು.

ಬೆಂಗಳೂರಿನ ನಯನ ಸಭಾಂಗಣ ಕನ್ನಡ ಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ನಾಡಿನ ಸಾಧಕ ಪತ್ರಕರ್ತರಿಗೆ “ಪಾಟೀಲ್ ಪುಟ್ಟಪ್ಪ ಮಾಧ್ಯಮ ಪ್ರಶಸ್ತಿ” ಪ್ರಧಾನ ಸಮಾರಂಭದ ಪ್ರಯುಕ್ತವಾಗಿ ಏರ್ಪಡಿಸಿರುವ ಯಾದಗಿರಿಯ ಖ್ಯಾತ ಚಿತ್ರ ಕಲಾವಿದರಾದ ಮೇಘನಾಥ್ ಅಬ್ರಾಹಿಂ ಬೆಳ್ಳಿಯವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ಬಣ್ಣಗಳಿಂದ ಕಲೆಗಳಿಗೆ ಜೀವ ತುಂಬಿ ನೋಡುಗರನ್ನ ಆಕರ್ಷಣೆಗೊಳಪಡಿಸಿ, ಖುಷಿಪಡಿಸುವುದೇ ಚಿತ್ರಕಲೆಯ ಇನ್ನೊಂದು ಅಂಶವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ ಮಾತನಾಡಿ, ಒಬ್ಬ ಕಲಾವಿದ ಪ್ರಜ್ಞಾಪೂರ್ವಕವಾಗಿ ಹಾಗೂ ಅರ್ಥಗರ್ಭಿತವಾಗಿ ಕಲೆಗಳನ್ನು ಚಿತ್ರಿಸಿದಾಗ ಪರಸ್ಪರ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಸವಿಸ್ತಾರವಾಗಿ ಕಲಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು,ಶಾಲಾ ಕಾಲೇಜಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಕವಿಗಳು,ಕಲಾವಿದರು,ಸಾಹಿತಿಗಳು, ಪ್ರಕರ್ತರು ಕಲೆಗಳನ್ನ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು,ಈ ಸಂದರ್ಭದಲ್ಲಿ ಚಿತ್ರಕಲಾವಿದರದ ಮೇಘನಾಥ್ ಬೆಳ್ಳಿಯವರನ್ನು ಪತ್ರಕರ್ತರ ವೇದಿಕೆ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು. ನಂತರ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಮಾರಂಭದ ವೇದಿಕೆಯ ಮೇಲೆ, ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು,ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ,ಮೋಹನ್ ಕುಮಾರ್ ದಾನಪ್ಪ,ಹಿರಿಯ ಸಾಹಿತಿ,ಸಂಘಟಕ ಸಂಗಮೇಶ್ ಬಾದವಾಡಗಿ, ಸಾಹಿತಿ ಹಾಗೂ ನ್ಯಾಯವಾದಿಗಳಾದ ಕೆ.ಎಲ್.ಕುಂದರಗಿ,ಜಾನಪದ ಕಲಾವಿದ ಶರಣಪ್ಪ ವಡಿಗೇರಿ, ಚಲನಚಿತ್ರ ನಿರ್ದೇಶಕ,ಪಾಂಡವಪುರ ಮಂಜು, ಪತ್ರಿಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಮಹೇಶ್ ಬಾಬು ಸುರ್ವೆ ಸೇರಿದಂತೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here