ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡಗಳ ಬಡಾವಣೆಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ನಿಗದಿಪಡಿಸಲಾಗಿದೆ.
ಜು.15 ರಿಂದ 22ರ ವರೆಗೆ ಪ್ರತಿ ದಿನ ಬೆಳಿಗ್ಗೆ 11:00 ಗಂಟೆಗೆ ಸಭೆಗಳು ನಡೆಯಲಿವೆ. ಆದ್ದರಿಂದ ಆಯಾ ಬಡಾವಣೆಯ ನಿವಾಸಿಗಳು ಸ್ಥಳದಲ್ಲಿರುವ ಪುರಸಭೆ ಸಿಬ್ಬಂದಿಗಳಿಗೆ ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್ ತಿಳಿಸಿದ್ದಾರೆ.