ಕಲಬುರಗಿ: ವಿಜಯಪುರ ನಗರದಲ್ಲಿ ತಾಂತ್ರಿಕ ಯುಗದಲ್ಲಿ ಭಾಷೆಯೂ ಸಹಿತ ತಂತ್ರಿಕತೆಯೊಂದಿಗೆ ಬದಲಾವಣೆ ಹೊಂದಬೇಕು ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿ. ಕೆ. ತುಳಸಿಮಾಲಾ ಅವರು ನುಡಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರದ ಹಿಂದಿ ವಿಭಾಗ ಮತ್ತು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕಲಬುರ್ಗಿಯ ಹಿಂದಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಒಂದು ದಿನದ “2024-25 ನೆಯ ಸಾಲಿನ. ಪಠ್ಯಕ್ರಮ” ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ತಾಂತ್ರಿಕತೆಯಲ್ಲಿ ಬಹಳಷ್ಟು ಬದಲಾವಣೆ ಯಾಗುತ್ತಿರುವ ಸಂದರ್ಭದಲ್ಲಿ ಭಾಷೆಯೂ ಸಹ ಹಲವಾರು ರೀತಿಯಲ್ಲಿ ಬದಲಾವಣೆ ಹೊಂದುತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಲಸಚಿವರಾದ ಶಂಕರಗೌಡ ಸೋಮನಾಳ ಅವರು ಸಾಹಿತ್ಯ ಒತ್ತಾಯದ ಹೇರಿಕೆ ಯಾಗದೆ, ಸಾಹಿತ್ಯ ನು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಆಶಯ ಭಾಷಣವನ್ನು ವಿಶ್ವವಿದ್ಯಾಲಯದ ಆಯ.ಕ್ಯೂ. ಎ.ಸಿ. ನಿರ್ದೇಶಕರಾದ ಪೆÇ್ರ ಪಿ. ಜಿ. ತಡಸದ ಅವರು 2024-25ರಲ್ಲಿ ಬರುತ್ತಿರುವ ಹೊಸ ಪಾಠ್ಯಕ್ರಮದ ಆಯಾಮಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಪೆÇ್ರ ನಾಮದೇವ ಗೌಡ ವಹಿಸಿಕೊಂಡು ಹೊಸ ಪಾಠ್ಯ ಕ್ರಮದಲ್ಲಿರುವ ವಿಶೇಷತೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಿ.ಜಿ. ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ಪ್ರಾಸ್ತಾವಿಕವಾಗಿ ಮಾತು ಸ್ವಾಗತ ಭಾಷಣ ಮಾಡಿದರು.
ಉದ್ಘಾಟನಾ ಸಮರಂಭದ ನಂತರ ಸೋಲಾಪುರ ಸಾಹಿತಿಗಳು ಮತ್ತು ಪ್ರಾಧ್ಯಾಪಕರಾದ ಪೆÇ್ರ. ಧನ್ಯಕುಮಾರ ಬಿರಾಜದಾರ ಅವರು ಸಂಪೂರ್ಣ ಪಾಠ್ಯಕ್ರಮದ ಕುರಿತು ಎಲ್ಲರಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಮಹಾವಿದ್ಯಾಲಯಗಳ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.