520 ಪ್ರಕರಣ ಇತ್ಯರ್ಥ,14 ಕೋಟಿ ರೂ. ಪರಿಹಾರಕ್ಕೆ ಆದೇಶ: ಹೈಕೋರ್ಟ್ ನಲ್ಲಿ ಜರುಗಿದ ಲೋಕ ಅದಲಾತ್: 520 ಪ್ರಕರಣ ಇತ್ಯರ್ಥ,14 ಕೋಟಿ ರೂ. ಪರಿಹಾರಕ್ಕೆ ಆದೇಶ

0
30

ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಇಲ್ಲಿನ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜರುಗಿದ ಜನತಾ ಅದಾಲತ್ ನಲ್ಲಿ ಪರಸ್ಪರ ರಾಜಿ ಸಂಧಾನದ ಮೂಲಕ 520 ಪ್ರಕರಣ ವಿಲೇವಾರಿ ಮಾಡಿ 14,00,71,305 ರೂ. ಪರಿಹಾರ ವಿತರಣೆಗೆ ಜನತಾ ನ್ಯಾಯಾಲಯ ಆದೇಶಿಸಿತ್ತು.

ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯಿಂದ ಆಯೋಜಿಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ವಿಮೆ ಮತ್ತು ಸಿವಿಲ್ ಪ್ರಕರಣಗಳನ್ನು ಅರ್ಜಿದಾರ, ಪ್ರತಿವಾದಗಳು ಹಾಗೂ ವಕೀಲರ ಸಮಕ್ಷಮ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು.

Contact Your\'s Advertisement; 9902492681

ಲೋಕ ಅದಾಲತ್‌ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಅಶೋಕ ಎಸ್.ಕಿಣಗಿ, ನ್ಯಾ.ಉಮೇಶ್ ಎಂ.ಅಡಿಗ ಹಾಗೂ ನ್ಯಾ.ರಾಜೇಶ್ ರೈ.ಕೆ ರವರು ಭಾಗವಹಿಸಿದ್ದರು.

ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ದಯಾನಂದ ವೀ.ಹಿರೇಮಠ, ಅಪರ‌ ಮಹಾ ವಿಲೇಖನಾಧಿಕಾರಿ ಬಸವರಾಜ ಚೇಂಗಟಿ ಸೇರಿದಂತೆ ನ್ಯಾಯಾವಾದಿಗಳು, ಕಕ್ಷಿದಾರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here