ಕಲಬುರಗಿ; ನಗರದ ಹೊರವಲಯದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಹಾಗೂ ಎನ್.ಐ.ಒ.ಎಸ್.(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್) ಬೆಂಗಳೂರು ರವರ ಸಂಯುಕ್ತಾಶ್ರದಲ್ಲಿ ಈಗಾಗಲೇ ಸ್ಥಾಪಿತ ಗೊಂಡಿರುವ ಗ್ರಾಮ ಪಂಚಾಯತ ಅರಿವು ಕೇಂದ್ರಗಳಲ್ಲಿ ಎನ್.ಐ.ಒ.ಎಸ್ ವತಿಯಿಂದ ಪ್ರಾದೇಶಿಕ ವಿಭಾಗದಲ್ಲಿ ಮಾನ್ಯತೆ ಪಡೆದಿರುವ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ರವರಿಗೆ ಒಂದು ದಿನದ ತರಬೇತಿ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮಉದ್ಘಾಟಿಸಲಾಯಿತು. ಕಲಬುರಗಿ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕರು ಧನರಾಜ್ ಬೋರಾಳೆ, ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ವಲಯ ನಿರ್ದೇಶಕರಾದ ಸ್ವಾಮಿನಾಥ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಆನ್ಲೈನ್ ಮೂಲಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು (ಪಂ.ರಾಜ್) ಉಮಾ ಮಹಾದೇವನ್ ರವರು ತರಬೇತಿಯ ದಿಕ್ಸೂಚಿ ಕುರಿತು ಮಾತನಾಡಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಕೇಂದ್ರದ ಬೋಧಕರಾದ ಡಾ. ಟಿ.ವೆಂಕಟೇಶ, ಬೋಧಕರಾದ ಕು.ದೀಪಾ, ಎನ್ ಎನ್.ಐ.ಒ.ಎಸ್. ಕೇಂದ್ರ ಬೆಂಗಳೂರು ಯೋಜನಾ ಸಂಯೋಜಕರಾದ ದೇವರಾಜು ಎಲ್. ಭಾಗವಹಿಸಿ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣದ ಮಹತ್ವ, ಅರಿವು ಕೇಂದ್ರಗಳಲ್ಲಿ ಎನ್.ಐ..ಒ.ಎಸ್ ಶೈಕ್ಷಣಿಕ ನೆರವು ಕೇಂದ್ರ ಸ್ಥಾಪನೆ , ಕೋರ್ಸಗಳು, ಅನುಷ್ಠಾನ ಸಂಸ್ಥೇಗಳು, ಪಠ್ಯಕ್ರಮ ಪರೀಕ್ಷಾ ಪ್ರಕ್ರಿಯೆ ಇತ್ಯಾದಿ ಕುರಿತು ೬ ಅಧಿವೇಶನದ ಮೂಲಕ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಪ್ರಾದೇಶಿ ಕೇಂದ್ರದ ಬೋಧಕರಾದ ಶಿವಪುತ್ರಪ್ಪ ರವರು ನಿರೂಪಿಸಿದರು.
ಬೋಧಕರಾದ ಡಾ.ರಾಜು ಕಂಬಳಿಮಠ, ಸ್ವಾಗತಿಸಿದರು. ಬೋಧಕರಾದ ಸಂತೋಷ ಎನ್. ವಂದಿಸಿದರು. ಕಾರ್ಯಕಮದಲ್ಲಿ ಆಡಳಿತ & ಲೆಕ್ಕಾಧಿಕಾರಿಗಳಾದ ಕು.ಸಾಕ್ಷಿ ಪಾಟೀಲ್, ಸಿಬ್ಬಂಧಿಗಳಾದ ಅರ್ಚನ ಪಾಟೀಲ್ ಅಶ್ವೀನಿ ಪೂಜಾರಿ ರವರು ಉಪಸ್ಥಿತರಿದ್ದರು.