ಗದಗದಲ್ಲಿ ಜರಗುವ ಸಂಘದ ಮಹಾ ಸಮಾರಂಭ ಯಶಸ್ವಿಗೊಳಿಸಿ; ರಾಜ್ಯಾಧ್ಯಕ್ಷ ಅಮರೇಶ

0
36

ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಶಾಮಿಯಾನ್,ಡೆಕೋರೇಷನ್,ಲೈಟಿಂಗ್,ಧ್ವನಿವರ್ಧಕ ಮಾಲೀಕರ ಕ್ಷೇಮಾಭಿವೃಧ್ಧಿ ಸಂಘದ ವಾರ್ಷಿಕೋತ್ಸವ ಹಾಗೂ ಆ.17,18 ಹಾಗೂ 19 ರಂದು ಗದಗದಲ್ಲಿರುವ ಜರುಗಲಿರುವ ಮಹಾ ಅಧಿವೇಶನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಅಮರೇಶ ಹಿರೇಮಠ ಮಾತನಾಡಿ,ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಅಚ್ಚುಕಟ್ಟಾಗಿ ಶಾಮಿಯಾನ್, ಡೆಕೋರೇಷನ್, ಲೈಟಿಂಗ್, ಧ್ವನಿವರ್ಧಕ ಅಳವಡಿಸಿ ಶ್ರದ್ಧೆಯಿಂದ ಶ್ರಮಿಸಿ ಕಾರ್ಯಕ್ರಮಕ್ಕೆ ಶೋಭೆ ತೋರುವ ಕಾರ್ಮಿಕರು ಒಗ್ಗಟ್ಟಿನಿಂದ ಕೆಲಸ ಮಾಡಿ ನಮ್ಮ ಶಕ್ತಿ ಅನಾವರಣಗೊಳಿಸಿ, ಗದಗನಲ್ಲಿ ಜರುಗುವ ಮಹಾ ಅಧಿವೇಶನಕ್ಕೆ ಆಗಮಿಸಬೇಕೆಂದು ಎಂದು ಉತ್ತರ ಕರ್ನಾಟಕ ಶಾಮಿಯಾನ್, ಡೆಕೋರೇಷನ್, ಲೈಟಿಂಗ್, ಧ್ವನಿವರ್ಧಕ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರೇಶ ಹಿರೇಮಠ ಹೇಳಿದರು.

Contact Your\'s Advertisement; 9902492681

ಪಟ್ಟಣದಲ್ಲಿ ನಡೆದ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘದ ಸರ್ವ ಸದಸ್ಯರು ಅವರಿವರೆನ್ನದೇ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳಲ್ಲಿ ಅಚ್ಚುಕಟ್ಟಾಗಿ ಲೈಟ್, ಡೆಕೋರೇಶನ್ ಹಾಗೂ ಧ್ವನಿವರ್ಧಕ ಅಳವಡಿಸಿ ಎಲ್ಲರ ಮೆಚ್ಚುಗೆಗಳಿಸುವ ನಾವುಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಒಗ್ಗಟ್ಟು ಪ್ರದರ್ಶಿಸಬೇಕು.

ಕಾರ್ಮಿಕರಾಗಿರುವ ನಾವುಗಳು ,ಸರಕಾರ ದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಯಶಸ್ಸುಗಳಿಸಬೇಕು. ಇದೇ ತಿಂಗಳ 17,18 ಹಾಗೂ 19ರಂದು ಗದಗದಲ್ಲಿ ನಡೆಯುವ 3ನೇ ಅಧಿವೇಶನ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಹೆಚ್ಚಿನ ಕಾಮರ್ಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಜಿಲ್ಲೆಯ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಸಭೆಯಲ್ಲಿ ಮಾತನಾಡಿದರು.

ನಂತರ ಉಪಾಧ್ಯಕ್ಷ ಲಕ್ಷ್ಮಣ ಸಿಗ್ಗಾವಿ ಮಾತನಾಡಿ, ಕಾರ್ಮಿಕರ ಕಾರ್ಡ, ಹಾಗೂ ಅಂಚೆ ಕಛೇರಿಯಲ್ಲಿ ಜೀವವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಹಜ್ ಹೋಗಿ ಬಂದ ಪ್ರಯುಕ್ತ ಸನ್ಮಾನಿಸಲಾಯಿತು. ಕಾಶೀವಿಶ್ವನಾಥ ದರ್ಶನ ಪಡೆದ ಹಿರಿಯ ನಾಗರೀಕರಿಗೆ ಸನ್ಮಾನ, ಜಿಲ್ಲಾ ಮಟ್ಟ ಪತ್ರಕರ್ತ ಪ್ರಶಸ್ತಿ ಪಡೆದ ಗವಿಸಿದ್ದೇಶ ಹೊಗರಿ, ಸಾವಯುವ ಕೃಷಿ ಸಾಧಕ ದೇವಿಂದ್ರಪ್ಪ ಭೋಯಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಚನ್ನಬಸವ ಗಸ್ತಿ, ಬಸನಗೌಡ ನಗನೂರ, ಶೇಖ್ ಅಹಮ್ಮದ್ ಹುಣಸಗಿ, ಹಣಮಂತ್ರಾಯ, ವೀರಭದ್ರಯ್ಯ ಹಿರೇಮಠ, ಬಸವರಾಜ ಕೋಳೂರು, ಬಸವರಾಜ ಹುಣಸಗಿ, ಶ್ರೀಶೈಲ, ಶಿವರಾಜಪ್ಪಗೌಡ, ಪಾಪಣ್ಣ, ಬಿಕ್ಕುಲಿಂಗ, ಮೈಹಿಬೂಬಸಾಬ ಮುದಗಲ್, ಗುತ್ತಯ್ಯಸ್ವಾಮಿ, ಈರಯ್ಯಸ್ವಾಮಿ, ಮಹಿಬೂಬ ಎಲಿಗಾರ, ನಬೀಸಾಬ, ಮುಸ್ತಾಫ್, ಮೌನೇಶ ಹುಣಸಿಹೊಳೆ, ಸುನೀಲ್ ಪತಂಗಿ, ಪ್ರವೀಣಸ್ವಾಮಿ, ದೇವಿಂದ್ರಪ್ಪ ಬೋಯಿ, ಗಜರಾಜ ಕ್ಯಾಂಪ್, ಕರೀಮಸಾಬ, ಭೈರಿನಾಥ ಸಾಳಿ, ಸಂಗಣ್ಣ ಮಡ್ಡಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಹಾಗೂ ಹೋಬಳಿ ಹಾಗೂ ಇತರೆ ಗ್ರಾಮಗಳಿಂದ ನೂರಾರು ಶಾಮಿಯಾನ್, ಟೆಂಟ್ ಮಾಲೀಕರು ಇದ್ದರು.
ಬಸಯ್ಯಸ್ವಾಮಿ ನಿರೂಪಣೆ ಮಾಡಿದರು. ಶೇಖ್ ಅಹಮ್ಮದ್ ಸ್ವಾಗತಿಸಿದರು. ಮಹಾಂತೇಶ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here