ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

0
37

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಹೇಳಿದರು.

ಸೋಮವಾರದಂದು ಕಲ್ಯಾಣ ಕರ್ನಾಟಕ ದಶಮಾನೋತ್ಸವದ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಏಕ ಬಳಕೆಯ ಪ್ಲಾಸ್ಟಿಕ ನಿಷೇಧ ಆಯೋಜಿಸಿದ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಪ್ಲಾಗಾಥಾನ್ ಎಂಬುವುದು ಸ್ವೀಡನ್ ದೇಶದಲ್ಲಿ ಆರಂಭವಾಗಿದೆ. ಪ್ಲಾಗಾಥಾನ್ ಎಂದರೆ ಜಾಗಿಂಗ್ ಮಾಡುವುದರ ಜೊತೆಗೆ ಕಸವನ್ನು ತೆಗೆಯುವುದು ಎಂದರ್ಥವಾಗುತ್ತದೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಇನ್ನು ಪ್ಲಾಗಥಾನ್ ಕಾರ್ಯಕ್ರಮದಲ್ಲಿ ಬಹುನಾನ ಇಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜೇತರಾದ ಅತಿ ಹೆಚ್ಚು ಕಸವನ್ನು ಸಂಗ್ರಹಿಸಿ ಬಂದಂತಹ ವಿಧ್ಯಾರ್ಥಿಗಳಿಗೆ ಪ್ರಥಮ,೧೫೦೦೦ ದ್ವಿತೀಯ ೧೫೦೦೦ ತೃತೀಯ ೫೦೦೦ ನಗದು ರೂಪದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು.

ಕಲಬುರಗಿಯ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ಕಲಬುರಗಿಯ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಬೇಕು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅನೇಕ ಕಡೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ ಅಂಥವರ ವಿರುದ್ಧ ಮಹಾನಗರ ಪಾಲಿಕೆಯ ವತಿಯಿಂದ ಹಾಗೂ ಜಿಲ್ಲಾಡಳಿತದಿಂದ ಕಠಿಣ ಕ್ರಮಕೈಗೊಂಡಾಗ ಮಾತ್ರ ಸ್ವಚ್ಫತೆ ಕಾಪಾಡಲು ಸಾಧ್ಯ ಎಂದರು.

ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕರು ಅಲ್ಲಫ್ರಭು ಪಾಟೀಲ್ ಮಾತನಾಡಿ ಪ್ಲಾಸ್ಟಿಕ್ ಮಾರಾಟ ಮಾಡುವವರ ವಿರುದ್ಧ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯಿಂದ ಕಠಿಣ ಕ್ರಮಕೈಕೊಳ್ಳಬೇಕು ಅಂದಾಗ ಮಾತ್ರ ಪ್ಲಾಸ್ಟಿಕ ಮಾರಾಟ ಮಾಡುವುದನ್ನು ತಡೆಗಟ್ಟು ಬಹುದಾಗಿದೆ ಎಂದರು

ಮಹಾನಗರ ಪಾಲಿಕೆ ಕಚೇರಿ ವ್ಯವಸ್ಥಾಪಕರಾದ ವಿಜಯಲಕ್ಷಿ ಗುಡಿ ಮಹಾತ್ಮಾ ಗಾಂಧೀಜಿಯವರು ಸ್ವತಂತ್ರವಾದುದಲ್ಲದೇ, ಸ್ವಚ್ಫ ಹಾಗೂ ಅಭಿವೃದ್ದಿ ಹೊಂದಿದ ಭಾರತ ದೇಶದ ಕನಸನ್ನು ಹೊಂದಿದ್ದರು. ನಾನು ಸ್ವಚ್ಫತೆ ಕಡೆಗೆ ಬದ್ಧತೆಯನ್ನು ಇಟ್ಟುಕೊಂಡು ಈ ಪ್ರತಿಜ್ಞೆಯನ್ನು ಮಾಡುತ್ತಿದ್ದೇನೆ ಹಾಗೂ ಸ್ವಚ್ಫತೆಗಾಗಿ ಸಮಯ ಮೀಸಲಿಡುತ್ತೇನೆ ಎಂದು ಪ್ರತಿಜ್ಞೆ ವಿಧಿ ಬೋಧಿಸಿದರು.

ಮಂಡಳಿಯ ಕಾರ್ಯದರ್ಶಿ ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ ಫೌಜಿಯ ತರನ್ನುಮ್, ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ದೇವದಾಸ್ ಪಾಟೀಲ್, ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮಸಿದ್ಧಾ ರೆಡಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here