ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಟಿವಿ ಛಾನೆಲ್ ಎಸ್ ಎಸ್ ವಿ ಟಿವಿ ಮತ್ತು ಜೈ ಭೀಮ್ ಟಿವಿ ಅಡಿಯಲ್ಲಿ ಕೆಐಡಿಸಿಸಿ ಕಪ್ ಕ್ರಿಕೆಟ್ ಟೋರ್ನಮೆಂಟ್ ಇದೇ 28 ರಿಂದ ಐದು ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಿಕೇಟ್ ಟೋರ್ನಾಮೆಂಟ್ನ’ನ ಲಾಂಛನ ಬಿಡುಗೊಳಿಸಿದರು.
ಕಳೆದ ಎರಡು ವರ್ಷಗಳಿಂದ ಕೆಐಡಿಸಿಸಿ ಕ್ರಿಕೆಟ್ ಟೊರ್ನಮೆಂಟ್ ನಡೆಸುತ್ತಿದ್ದು, ಈ ಟೋರ್ನಮೆಂಟ್ನಲ್ಲಿ ಕಲಬುರಗಿಯ ಎಲ್ಲಾ ಸರಕಾರಿ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸುತ್ತಾರೆ. ಕಳೆದ ಎರಡು ಸೀಸನ್’ನ ಚಾಂಪಿಯನ್ ಶಿಪ್ ಅನ್ನು ಕಲಬುರಗಿ ಜಿಲ್ಲಾ ಪೋಲೀಸ್ ತಂಡ ಗೆದ್ದುಕೊಂಡಿದ್ದು, ಮೊದಲ ಸೀಸನ್’ನ ರನ್ನರ್ ಅಪ್ ಆಗಿ ನಗರ ಪೋಲಿಸ್ ತಂಡ ಸ್ಥಾನ ಗಿಟ್ಟಿಸಿಕೊಂಡಿತ್ತು, ಎರಡನೇ ಸೀಸನ್’ನ ಸ್ಥಾನವನ್ನ ಆರೋಗ್ಯ ಇಲಾಖೆ ಪಡೆದುಕೊಂಡಿತ್ತು, ಈ ಬಾರಿಯೂ ಕೂಡ ಅದೇ ಉತ್ಸಾಹದಲ್ಲಿ ಎಲ್ಲಾ ಇಲಾಖೆಯ ಚಾಂಪಿಯನ್’ಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ಟೋರ್ನಾಮೆಂಟ್ ಏರ್ಪಡಿಸಿದ್ದು ಇದರ ಲಾಂಛನವನ್ನು ಸಿಎಂ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಿ ಎಂ ಸಲಹೆಗಾರ ಬಿ ಆರ್ ಪಾಟೀಲ್, ಶಾಸಕ ಎಂ ವೈ ಪಾಟೀಲ್, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್, ಎಸ್ ಎಸ್ ವಿ ಚಾನೆಲ್’ನ ನಿರ್ದೇಶಕರು ವಿಜೇಂದ್ರ ಕೋಡ್ಲಾ, ಚಾನೆಲ್ ಸಿಇಓ ರಾಜಶೇಖರಯ್ಯ, ಜಿಲ್ಲಾ ವರದಿಗಾರ ರಮೇಶ ಶಿಕಾರಿ, ಶಾಸಕ ಬಿ ಆರ್ ಪಾಟೀಲ್ ಸೇರಿದಂತೆ ಇತರರು ಇದ್ದರು.