ಸಮಾಜವಾದಿ ಕ್ರಾಂತಿಯಿಂದಲೇ ಜನಸಾಮಾನ್ಯರ ಸಮಸ್ಯೆಗಳಿಗೆ ವಿಮುಕ್ತಿ ಕಾಣಲು ಸಾಧ್ಯ

0
212

ಶಹಾಬಾದ: ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದಲೇ ಮಾತ್ರ ಜನಸಾಮಾನ್ಯರ ಸಮಸ್ಯೆಗಳಿಗೆ ವಿಮುಕ್ತಿ ಕಾಣಬಹುದು ಎಂದುಎಸ್‍ಯುಸಿಐ (ಸಿ) ಪಕ್ಷದ ರಾಜ್ಯ ಸಮಿತಿಯ ಸದಸ್ಯ ಕಾಮ್ರೇಡ್ ವಿ.ಎನ್.ರಾಜಶೇಖರ ಹೇಳಿದರು.

ಅವರು ಸೋಮವಾರ ಎಸ್‍ಯುಸಿಐ (ಸಿ) ಪಕ್ಷದ ವತಿಯಿಂದ ಹನುಮಾನ ನಗರದಲ್ಲಿ ಆಯೋಜಿಸಲಾದ ಎಸ್‍ಯುಸಿಐ(ಸಿ)ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ ಘೋಷ್ ರವರ 48ನೇ ಸ್ಮಾರಕ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ದೇಶ ಸ್ವತಂತ್ರಗೊಂಡು ಏಳು ದಶಕಗಳು ಕಳೆದರೂ ಸಹ ಜನಸಾಮಾನ್ಯರ ಜೀವನವು ಯಾತನಮಯವಾಗಿದೆ. ದೇಶವನ್ನು ಆಡಳಿತ ಮಾಡಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ಎಲ್ಲಾ ಪಕ್ಷಗಳು ಜನವಿರೋಧಿಗಳಾಗಿದ್ದು ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ದೇಶದಾದ್ಯಂತ ಬಡತನ, ಬೆಲೆಏರಿಕೆ, ನಿರುದ್ಯೋಗ, ಅನಕ್ಷರತೆ, ಮಹಿಳೆಯರ ಮೇಲಿನ ದೌರ್ಜನ್ಯ, ರೈತರ ಆತ್ಮಹತ್ಯೆ, ಕೋಮುವಾದ, ಶಿಕ್ಷಣದ ವ್ಯಾಪಾರೀಕರಣ ಮುಂತಾದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಜನರು ಒಗ್ಗಟ್ಟಾಗಿ ಜನಾಂದೋಲನವನ್ನು ಬೆಳೆಸಿ, ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯಿಂದ ಮಾತ್ರ ಈ ಎಲ್ಲಾ ಸಮಸ್ಯೆಗಳಿಗನ್ನು ಪರಿಹರಿಸಲು ಸಾಧ್ಯವೆಂದು ಹೇಳಿದರು.

ಎಸ್‍ಯುಸಿಐ (ಸಿ) ಪಕ್ಷದ ಸ್ಥಳಿಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ಮಾತನಾಡಿ, ಕಾಮ್ರೇಡ ಶಿವದಾಸ್ ಘೋಷ ಅವರು ಅಗಲಿ 48 ವರ್ಷಗಳು ಗತಿಸಿವೆ. 1976ರಲ್ಲಿ ಅವರು ಪಕ್ಷಿಮ ಬಂಗಾಳದ ಕಲಕತ್ತಾದ ಪಕ್ಷದ ಕಮ್ಯೂನ್‍ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಇಡೀ ತಮ್ಮ ಜೀವಮಾನದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದರು. ಎಷೋ ದಿನ ಅವರು ಉಪವಾಸವಿದ್ದು ಪಕ್ಷವನ್ನು ಕಟ್ಟಿದರು. ಭಾರತ ದೇಶದ ಕ್ರಾಂತಿಯ ಬಗ್ಗೆ ಅವರಿಗೆ ಇದ್ದ ಅಚಲ ವಿಶ್ವಾಸ ಅವರನ್ನು ಒಬ್ಬ ನೈಜ್ಯ ಕ್ರಾಂತಿಕಾರಿಯನ್ನಾಗಿ ಮಾಡಿದೆ. ನಾವು ಕೂಡಾ ಕಾಮ್ರೇಡ ಶಿವದಾಸ್ ಘೋಷ ರವರ ವಿಚಾರವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿ ಸದಸ್ಯರಾದ ಬಾಗಣ್ಣ ಬುಕ್ಕಾ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಸಮಿತಿಯ ಸದಸ್ಯರಾದ ಕಾಮ್ರೇಡ್ ರಾಘವೇಂದ್ರ ಎಮ್.ಜಿ. ಜಗನ್ನಾಥ ಎಸ್.ಎಚ್, ಗುಂಡಮ್ಮ ಮಾಡಿವಾಳ, ರಾಜೇಂದ್ರ ಆತ್ನೂರ್ ಸೇರಿದಂತೆ ಪಕ್ಷದ ಹಾಗೂ ವಿವಿಧ ಸಂಘಟನೆಗಳ ನಾಯಕರಾದ ರಮೇಶ ದೇವಕರ್, ರಘು ಪವಾರ, ರಾಧಿಕಾ ಚೌಧರಿ, ನೀಲಕಂಠ ಹುಲಿ, ಶ್ಯಾಮ್ ಪವಾರÀ, ಆನಂದ, ದೇವರಾಜ, ತೇಜಸ್, ರೇಷ್ಮಾ ಇಬ್ರಾಹಿಂಪೂರ, ಅಜಯ್ ಗುರಜಾಲಕರ, ಸ್ಫೂರ್ತಿ ಗುರಜಾಲಕರ್, ಬಾಬು ಪವಾರ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here