ಶರಣರ ಅನುಭಾವ ಚಿಂತನೆಗಳು ಇಂದಿಗೂ ಪ್ರಸ್ತುತ : ಶಾಸಕ ಅಲ್ಲಮಪ್ರಭು ಪಾಟೀಲ್

0
43

ಕಲಬುರಗಿ: ಶರಣರಂತೆ ನೈಜತೆಯನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಸಾಧ್ಯ.ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಿಳಿಸಿದರು.

ಶ್ರಾವಣ ಮಾಸ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಒಂದು ತಿಂಗಳು ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪುರಾಣ, ಪ್ರವಚನಗಳು ಕೇಳುವುದರಿಂದ ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡುವುದಷ್ಟೇ ಅಲ್ಲ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ.ಮೇಲು, ಕೀಳೆಂದು ತಾರತಮ್ಯ ಇರುವುದಿಲ್ಲ.ಸಮಾನತೆಯ ಬೆಳಕು ಚೆಲ್ಲುವ ಕಾರ್ಯ ಮಾಡಿದವರೇ ಶರಣರು ಎಂದರು.

Contact Your\'s Advertisement; 9902492681

ಇಂದು ಪುರಾಣ, ಪ್ರವಚನಗಳು ಗ್ರಂಥಾಲಯಗಳಾಗಿವೆ.ಅಲ್ಲಿ ಶರಣರ ಸಾಧನೆಗಳು,ಅವರ ತ್ಯಾಗದ ಜೀವನ ಚರಿತ್ರೆ ತಿಳಿಯಬಹುದು.ಇಂಥ ಪುರಾಣಗಳು ಇನ್ನು ಹೆಚ್ಚು ನಡೆಯಬೇಕು.ಈ ವರ್ಷ ಜಯನಗರ ಶಿವಮಂದಿರಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ತಿಂಗಳ ಪೂರ್ತಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ ಕಲಬುರಗಿ ಶ್ರೀ ಶರಣಬಸವೇಶ್ವರರು ಕರುಣಾಮಯಿ. ಅಲ್ಲದೆ ಬೇಡಿ ಬಂದ ಭಕ್ತರಿಗೆ ನಿರಾಸೆ ಮೂಡಿಸುವುದಿಲ್ಲ.ಜೀವನ ಚರಿತ್ರೆ ತೆರದ ಪುಟದ ಪುಸ್ತಕದಂತೆ ಇತ್ತು.ಅಂದು ಶರಣಬಸವೇಶ್ವರು ಕಳ್ಳನ ಮನುಸ್ಸು ಪರಿವರ್ತನೆ ಮಾಡಿ ಆದರ್ಶ ವ್ಯಕ್ತಿಯಾಗಿ ರೂಪಿಸಿದರು ಎಂದು ತಿಳಿಸಿದರು.

ಹಿರಿಯ ಹೋರಾಟಗಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಶರಣಬಸವೇಶ್ವರರು ಪವಾಡ ಪುರುಷರು.ಅವತ್ತಿನ ದಿನದಲ್ಲೇ ಅನ್ನ ದಾಸೋಹದ ಮಹಿಮೆ ಇಡೀ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಜಯನಗರ ಶಿವಮಂದಿದಲ್ಲಿ ಪ್ರತಿ ವರ್ಷ ಶ್ರಾವಣ ಮಾಸ ಅಷ್ಟೇ ಅಲ್ಲದೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.ಗುಡಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.

ವೇದಮೂರ್ತಿ ಪುರಾಣ ಪಂಡಿತ ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀ ಪುರಾಣ ಪ್ರಾರಂಭಕ್ಕೆ ಚಾಲನೆ ನೀಡಿದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ‌ ಕೆ.ಬಿ ಸ್ವಾಗತಿಸಿದರು. ಮಹಾಳಾ ಸದಸ್ಯೆ ಅನುರಾಧಾ ಕುಮಾರಸ್ವಾಮಿ ಪ್ರಾರ್ಥಿಸಿದರು.ಸಾಹಿತಿ ಜಿ.ಜಿ.ವಣಿಕ್ಯಾಳ ನಿರೂಪಿಸಿದರು.ಉಪಾಧ್ಯಕ್ಷ ವಿರೇಶ ದಂಡೋತಿ ವಂದಿಸಿದರು.

ಎಂ.ಡಿ.ಮಠಪತಿ, ಬಸವರಾಜ ಅನ್ವರಕರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಶಿವಕುಮಾರ ಪಾಟೀಲ,ವಿರೇಶ ಹುಡುಗಿ,ಮನೋಹರ ಬಡಶೇಷಿ,ಬಂಡಪ್ಪ ಕೇಸೂರ, ಭೀಮಾಶಂಕರ ಶೆಟ್ಟಿ,ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ,ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಶಿವಪುತ್ರಪ್ಪ ಮರಡಿ, ಮಲ್ಲಯ್ಯ ಸ್ವಾಮಿ ಬೀದಿಮನಿ, ಜಗನ್ನಾಥ ಪಾಟೀಲ, ವಿನೋದ ಪಾಟೀಲ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಸದಸ್ಯೆಯರಾದ ಸುಜಾತಾ ಭೀಮಳ್ಳಿ, ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ, ಗೀತಾ ‌ಸಿರಗಾಪೂರ, ವಿಜಯಾ ದಂಡೋತಿ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here