ಕಲಬುರಗಿ: ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ ಯುವ ಸೈನ್ಯ ಕಲಬುರಗಿ ವತಿಯಿಂದ ತಾಲೂಕಿನ ಸೈಯದ ಚಿಂಚೋಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸುವ ಮೂಲಕ ಕೇಕ್ ಕತ್ತರಿಸಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರ ಹುಟ್ಟು ಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಸೈದಪ್ಪ ಡಾಂಗೆ ಮಾತನಾಡಿ,ವಿಧ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಭವಿಷ್ಯದ ಪ್ರಜೆಗಳಾಗಿ ತಮ್ಮ ಕುಟಂಬಕ್ಕೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಬೇಕು.ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ ಯುವ ಸೈನ್ಯ ವತಿಯಿಂದ ಅವರ ಹುಟ್ಟು ಹಬ್ಬವನ್ನು ಪ್ರತಿ ವರ್ಷ ಸರಕಾರಿ ಶಾಲೆಯ ಮಕ್ಕಳ ಸಮ್ಮುಖದಲ್ಲಿ ಅವರಿಗೆ ನೋಟ್ ಬುಕ್ ಮತ್ತು ಪೆನ್ನು ವಿತರಿಸುವ ಮೂಲಕ ವಿಧ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ವಿನೂತನವಾಗಿ ಆಚರಿಸುತ್ತೇವೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸಂಜುಕುಮಾರ ಜವಾಳಕರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಈರಣ್ಣ, ಔರಾದ ಮಾಜಿ ಗ್ರಾಪಂ. ಅಧ್ಯಕ್ಷ ಸುನಿಲಕುಮಾರ ಮದನಕರ್, ಗ್ರಾಪಂ ಸದ್ಯಸರಾದ ಶರಣಬಸಪ್ಪ ಸಂಗೋಳಗಿ, ಸೈಯದ್ ಪಟೇಲ್ ಮುಡ್ಡಿ,ಅಂಬರಾಯ ಕಾಂಬಳೆ, ಫಾರೂಕ ಪಟೇಲ, ಕಾಶೀನಾಥ ಪೂಜಾರಿ, ಎಸ್.ಡಿ.ಎಮ್ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಯಾಕಲೂರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಪ್ರಲಾದ ಡಾಂಗೆ, ಚಂದ್ರಶೇಖರ ಶಿರಸಗಿ, ಶರಣಬಸಪ್ಪ ಕೋರವಾರ, ಇಸ್ಮಾಯಿಲ್ ಪಟೇಲ, ಯಲ್ಲಪ್ಪ ಕಲ್ಲೂರ,ಸಚಿನ್ ಡಾಂಗೆ, ಶಬೀರ್ ಖಾನ್ ಪಠಣ, ಸೈಯದ್ ಚಿಂಚೋಳಿ ಸೇರಿದಂತೆ ಇತರರು ಇದ್ದರು.