ಸುರಪುರ: ಕೊತ್ತಲ ಬಸವೇಶ್ವರ ಭಾರತಿಯ ಶಿಕ್ಷಣ ಸಮಿತಿ ಸೇಡಂ ಹಾಗೂ ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಕಲಬುರಗಿ ವತಿಯಿಂದ ಭಾರತ ಸಂಸ್ಕøತಿ ಉತ್ಸವ-07 ರ ಅಂಗವಾಗಿ ನಗರದ ರಂಗಂಪೇಟೆಯ ಗುರುಕುಲ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ತಾಲೂಕ ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಚಿತ್ರಕಲಾ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಬಿಲ್ವಂಕೊಂಡಿಮಠ ಪ್ರಥಮ ಸ್ಥಾನ ಪಡೆದುಕೊಂಡ,ಅದರಂತೆ ಭಜನಾ ಸ್ಪರ್ಧೆಯಲ್ಲಿ ಮಾರುತೇಶ್ವರ ಭಜನಾ ಮಂಡಳಿ ರಂಗಂಪೇಟ ತಂಡ ಪ್ರಥಮ ಸ್ಥಾನ ಹಾಗೂ ದ್ವೀತಿಯಸ್ಥಾನ ದೊಡ್ಡ ಬಸವೇಶ್ವರ ಭಜನಾ ಮಂಡಳಿ ವೆಂಕಟಾಪುರ ತಂಡವು ಪಡೆಯಿತು.ತೃತೀಯ ಸ್ಥಾನ ಸಹಜಾನಂದ ಸರಸ್ವತಿ ಭಜನಾ ಮಂಡಳಿ ರಂಗಂಪೇಟೆ,ಮಹಿಳಾ ಭಜನೆಯಲ್ಲಿ ಶೀಲ್ಪಾ ಆವಂಟಿ ತಂಡಕ್ಕೆ ಪ್ರಥಮ ಸ್ಥಾನ ಪಡೆದರು.
ಇನ್ನುಳಿದಂತೆ ಕಥೆ ಹೇಳುವ,ಚಿತ್ರಕಲಾ ಸ್ಫರ್ಧೆ,ಭಾಷಣ ಸ್ಪರ್ಧೆ,ಶಾಸ್ತ್ರೀಯ ನೃತ್ಯ ಸ್ಪರ್ಧೆ,ರಂಗೋಲಿ ಸ್ಪರ್ಧೆ,ಸಮೂಹ ಗಾಯನ ಸ್ಪರ್ಧೆ,ಹಗ್ಗ ಜಗ್ಗಾಟ,ಸೂರ್ಯ ನಮಸ್ಕಾರ ಸ್ಪರ್ಧೆ,ರಸ ಪ್ರಶ್ನೆ ಸ್ಪರ್ಧೆ,ಕೋಲಾಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖತಲ್ ಅಹ್ಮದ್ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಶರಣಬಸವ ಚೆಟ್ಟಿ,ವಿಕಾಸ ಅಕಾಡೆಮಿ ಸಂಚಾಲಕ ಅಂಬಣ್ಣ ವಾರಿ,ಹಂಪಣ್ಣ ಹೆಮ್ಮಡಗಿ,ಸೋಮಶೇಖರ ಶಾಬಾದಿ,ಬಸವರಾಜ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ನಾಗಭೂಷಣ ಸ್ವಾಮಿ ಬಿಲ್ವಂಕೊಂಡಿಮಠ,ಜ್ಯೋತಿ ಕಲಾಲ, ಅಂಬಣ್ಣ, ಹಂಪಣ್ಣ,ಅನಿಲಕುಮಾರ,ದೇವಿಂದ್ರ ಕವಾತಿ,ಮಾನಪ್ಪ ನಾಲವಾರ,ಪದ್ಮಾಕ್ಷಿ ಶಿಕ್ಷಕಿ,ಮಲ್ಲು ಸಜ್ಜನ್,ನರಸಿಂಹಮೂರ್ತಿ ಹಳಿಜೋಳ,ರಮೇಶ ಉಪನ್ಯಾಸಕ,ರಜಿಯಾ ಬೇಗಂ,ಸುಶ್ಮಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.