ನಿವೃತ್ತ ಯೋಧನಿಗೆ ಅಭಿನಂದನಾ ಸಮಾರಂಭ 5 ರಂದು

0
226

ವಾಡಿ: ಭಾರತೀಯ ಸೇನಾ ಪಡೆ (ಸಿಆರ್‍ಪಿಎಫ್)ಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮ ನಿವಾಸಿ ಷಣ್ಮುಖ ಲೋಕು ಚವ್ಹಾಣ ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡು ಸಿದ್ಧತೆ ನಡೆಸುತ್ತಿದೆ.

ಎರಡು ದಶಕಗಳ ಕಾಲ ದೇಶದ ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ದೇಹಲಿ, ಓರಿಸ್ಸಾ, ಬಿಹಾರ ಸೇರಿದಂತೆ ಒಟ್ಟು 12 ರಾಜ್ಯಗಳ ಗಡಿ ರೇಖೆಯಲ್ಲಿ ವೃತ್ತಿ ಕರ್ತವ್ಯ ಮೆರೆಯುವ ಮೂಲಕ ರಾಷ್ಟ್ರ ಸೇವೆಗೈದ ತವರೂರಿಗೆ ಆಗಮಿಸುತ್ತಿರುವ ಹೆಮ್ಮೆಯ ಸೈನಿಕನನ್ನು ಸ್ವಾಗತಿಸಲು ಸೆ.5 ರಂದು ಮದ್ಯಾಹ್ನ 2:00 ಗಂಟೆಗೆ ಬಳವಡಗಿ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

Contact Your\'s Advertisement; 9902492681

ಇದಕ್ಕೂ ಮೊದಲು 10:30ಕ್ಕೆ ವಾಡಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಳವಡಗಿ ಗ್ರಾಮದ ಸಂತ ಶ್ರೀಸೇವಾಲಾಲ ಮಂದಿರ ವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.

ಶಹಾಬಾದ ಡಿವೈಎಸ್‍ಪಿ ಶಂಕರಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಚಿತ್ತಾಪುರ ಕಂಬಳೇಶ್ವರ ಮಠದ ಶ್ರೀಸೋಮಶೇಖರ ಸ್ವಾಮೀಜಿ, ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀಸಿದ್ಧಲಿಂಗ ಮಹಾಸ್ವಾಮೀಜಿ, ಯಲ್ಲಾಲಿಂಗ ಪುಣ್ಯಾಶ್ರಮದ ಶ್ರೀಜೇಮಸಿಂಗ್ ಮಹಾರಾಜ್, ಹಲಕರಟಿ ಸಿದ್ದೇಶ್ವರ ಹಿರೇಮಠದ ಶ್ರೀರಾಜಶೇಖರ ಸ್ವಾಮೀಜಿ, ಕೊಂಚೂರು ಮಹರ್ಷಿ ಸವಿತಾ ಪೀಠದ ಶ್ರೀಸವಿತಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.

ತಹಶೀಲ್ದಾರ ಅಮರೇಶ ಬಿರಾದಾರ ಅಧ್ಯಕ್ಷತೆ ವಹಿಸುವರು. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‍ಐ ಕೆ.ತಿರುಮಲೇಶ ಸೇರಿದಂತೆ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಯೋಧನ ಸಹೋದರ, ಹಲಕರಟಿ ಗ್ರಾಪಂ ಮಾಜಿ ಅಧ್ಯಕ್ಷ ಸೋಮು ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here