- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ತಾಲೂಕಿನ ಅಲ್ಲೂರ(ಕೆ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬೆನಕನ ಅಮಾವಾಸ್ಯೆ ನಿಮಿತ್ತ ಗ್ರಾಮದಲ್ಲಿ 101 ಎತ್ತುಗಳ ವಿಶೇಷ ಪೂಜೆ ನಡೆಯಿತು.
ಸುಮಾರು 200 ವರ್ಷಗಳ ಹಿಂದೆ ಗ್ರಾಮದಲ್ಲಿ ಮನುಷ್ಯರು ಮತ್ತು ಎತ್ತುಗಳು ಅನಾರೋಗ್ಯದಿಂದ ನರಳುತ್ತಿದ್ದರು. ಆಗ ದೇವರ ಮೊರೆ ಹೊದಾಗ 101 ಎತ್ತುಗಳ ಪೂಜೆಯನ್ನು ಮಾಡಬೇಕೆಂದು ಹೇಳಿದ ಕಾರಣ ಪ್ರತಿ ವರ್ಷ 101 ಎತ್ತುಗಳ ಪೂಜೆಯನ್ನು ಮಾಡಿದ್ದರಿಂದ ಎತ್ತುಗಳು ಮತ್ತು ಮನುಷ್ಯರು ಆರೋಗ್ಯವಾಗಿರುವ ನಂಬಿಕೆಯ ಮೇಲೆ ಇಂದಿಗೂ ಅಲ್ಲೂರ(ಕೆ) ಗ್ರಾಮದಲ್ಲಿ ಎತ್ತುಗಳ ಪೂಜೆಯನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಹಿರಿಯರಾದ ಮಹಾಂತೇಯ ಸ್ವಾಮಿ, ಶಿವಾನಂದಯ್ಯ ಸ್ವಾಮಿ, ಮಹೇಶ ಗೌಡ ದಳಪತಿ, ರವಿಗೌಡ, ರವಿ ಠಾಣಗುಂದಿ, ಶರಣಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವರು ಮಹಾಂತೇಶ್ವರ ಮಠದ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿದ ನಂತರ ಹಲುಗೆ, ಬಾಜಿ ನುಡಿಸುತ್ತಾ ಮಕ್ಕಳ ಕೋಲಾಟದ ಮೂಲಕ ಗ್ರಾಮದಲ್ಲಿ ಮೆರವಣೆಗೆ ನಡೆಸಿ ಗಂಗಮ್ಮ ತಾಯಿಗೆ ಪೂಜೆ ಸಲ್ಲಿಸಿದರು.