ಶ್ರೀ ತಿಂಥಣಿಯ ಮೌನೇಶ್ವರ ಜೋಡು ಪಲ್ಲಕ್ಕಿ ಉತ್ಸವ

0
17

ಆಳಂದ: ಪಟ್ಟಣದಲ್ಲಿ ನಡೆದ ಜಗದ್ಗುರು ತಿಂಥಣಿಯ ಮೌನೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಶ್ರೀ ಮೌನೇಶ್ವರರ ಹಾಗೂ ಶ್ರೀ ಕಾಳಿಕಾದೇವಿಯ ಜೋಡು ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದ ಮಧ್ಯೆ ಗುರುವಾರ ನೆರವೇರಿತು.

ಅಲ್ಲದೆ, ಬಳಿಕ ನಡೆದ ಧರ್ಮಸಭೆಯಲ್ಲಿ ಮೌನೇಶ್ವರರ ಪುರಾಣ ಮಹಾಮಂಗಲ ವಿದ್ಯುಕ್ತವಾಗಿ ನಡೆಯಿತು.
ಗುರುವಾರ ಬೆಳಗಿನ ವೇಳೆ ದೇವಸ್ಥಾನದಿಂದ ಹೊರಟು ಪಲ್ಲಕ್ಕಿ ಉತ್ಸವದಲ್ಲಿ ಪುರುವಂತರಾದ ಅನಂತ ಸೋನಾರ, ರಮೇಶ ಪೋದ್ದಾರ, ಸೋಮನಾಥ ಸುತಾರ, ಮಂಜುನಾಥ ಸುತಾರ ನೇತೃತ್ವದಲ್ಲಿ ಇನ್ನೂಳಿದ ಹಿರಿಯ ಕಿರಿಯ ಪುರುವಂತರ ವೈವೀದ್ಯಮಯ ಸಾಂಪ್ರದಾಯಿಕ ಕುಣಿತವು ವಾದ್ಯ ವೈಭವಗಳೊಂದಿಗೆ ಸಾಗಿ ಮೆರವಣಿಗೆ ದೇವಸ್ಥಾಕ್ಕೆ ತಲುಪಿತು.

Contact Your\'s Advertisement; 9902492681

ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಶ್ರಾವಣ ಮಾಸದ ತಿಂಗಳಕಾಲ ಸಾಗಿಬಂದ ಮೌನೇಶ್ವರರ ಮಹಾಪುರಾಣವನ್ನು ಪುರಾಣ ಪಟು ವಾಗ್ಮೀ ಪಟ್ಟಣ ಗ್ರಾಮದ ಮಡಿವಾಳಪ್ಪ ಬಸಣ್ಣಾ ನಂದೂರ ಮಹಾಮಂಗಲಗೊಳಿಸಿದರು. ಕಲಾವಿದ ಗವಾಯಿ ರಾಜೇಂದ್ರ ಸುತಾರ, ತಬಲಾ ಸಾಥಿ ಸಂಜುರಾವ್ ದೇಶಪಾಂಡೆ ಸಂಗೀತ ನಡೆಸಿಕೊಟ್ಟರು.

ವೇದಿಕೆಯಲ್ಲಿ ಪುರವಂತರ ಸನ್ಮಾನ, ಮೌನೇಶ್ವರ, ಗೋನಾಳ ಆದಿಲಿಂಗೇಶ್ವರ, ಕಾಶಿ ವಿಶ್ವನಾಥÀ, ವರವಿ ಮೌನಲಿಂಗ, ಹಾಗೂ ಸಿರಸಂಗಿ ಕಾಳಿಕಾದೇವಿ ಹೆಸರಿನ ತೆಂಗಿನ ಲಿಲಾವು ನಡೆಯಿತು.

ವಿವಿಧ ರಾಜಕೀಯ ಮತ್ತು ನಾಗರಿಕ ಮುಖಂಡರು ಸೇರಿದಂತೆ ಈ ಸಂದರ್ಭದಲ್ಲಿ ಕಮೀಟಿ ಅಧ್ಯಕ್ಷ ರಘವೀರ ಸೋನಾರ, ಮನೋಹರ ಸೋನಾರ, ಹಿರಿಯ ವೀರಭದ್ರಪ್ಪ ಸುತಾರ, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವ ಕೆ. ಪೋದ್ದಾರ, ವಿಶ್ವಕರ್ಮ ಸಮಾಜ ಅಧ್ಯಕ್ಷ ಬಸವರಾಜ ತಡಕಲ್, ಮೋನಪ್ಪಾ ಸುತಾರ, ರಾಜು ಚಿಂಚೋಳಿ, ವಿಜಯಕುಮಾರ ಬಿ. ಸುತಾರ, ದವಲಪ್ಪ ವಣದೆ, ಗುರು ವಣದೆ, ರಘು ಡಿ. ಸುತಾರ, ಶ್ಯಾಣು ಸುತಾರ, ಅಣ್ಣಾರಾವ್ ಪೋದ್ದಾರ, ರುದ್ರಪ್ಪ ಸುತಾರ, ಶಂಕರ ಸುತಾರ, ಈರಣ್ಣಾ ಜಿ. ಆಳಂದ ಧಂಗಾಪೂರ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಿಂದ್ರಪ್ಪಾ ಮಾಸ್ಟರ್ ನಿರೂಪಿಸಿದರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here