ಸೀತಾರಾಮ್ ಯೆಚೂರಿ ನಿಧನ: ಧ್ವಜ ಅರ್ಧಕ್ಕಿಳಿಸಿ ಗೌರವ ಸಂತಾಪ

0
27

ಹಟ್ಟಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಸಿಪಿಐ(ಎಂ) ಪಕ್ಷದ ಧ್ವಜವನ್ನು ಅರ್ಧಕ್ಕಿಳಿಸಿ ಗೌರವ ಸಂತಾಪ ಸಲ್ಲಿಸಲಾಯಿತು.

ಹಟ್ಟಿ ಪಟ್ಟಣದ ಪಕ್ಷದ ಕಚೇರಿಯಲ್ಲಿ ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಗುರುವಾರದಂದು ಸಿಪಿಐಎಂ ಧ್ವಜ ಅರ್ಧಕ್ಕಿಳಿಸಿ ಮಾತನಾಡಿದರು.

Contact Your\'s Advertisement; 9902492681

ಎಸ್ಎಫ್ಐ ಅಖಿಲ ಭಾರತ ಮಾಜಿ ಅಧ್ಯಕ್ಷರಾದ ಕಾಂ. ಸೀತಾರಾಮ್ ಯೆಚೂರಿ ಅವರು 1975 ರಲ್ಲಿ ಜೆಎನ್ಯು ವಿವಿ ಯಲ್ಲಿ ಅಧ್ಯಯನ ಮಾಡುವಾಗ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ವಿರುದ್ಧ ಹೋರಾಟ ಮಾಡಿ ಜೈಲಿಗೆ ಸೇರಿದ್ದರು.

ವಿದ್ಯಾರ್ಥಿ ಯುವಜನರು ರೈತರು ಕಾರ್ಮಿಕರ ಪರ ಯಶಸ್ವಿ ಸಂಘರ್ಷಾತ್ಮಕ ಹೋರಾಟಗಳನ್ನು ಕಟ್ಟಿ ಪಾರ್ಲಿಮೆಂಟ್ ಸದಸ್ಯರಾಗಿ 2 ಬಾರಿ ಅತ್ಯುತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಜೀವನದ ಕೊನೆಯವರೆಗೂ ದುಡಿಯುವ ಜನರ ಪರವಾಗಿ, ಕೋಮುವಾದಿ ಫ್ಯಾಸಿಸ್ಟ್ ನ ಹಿಮ್ಮೆಟ್ಟಿಸಲು ಶ್ರಮಿಸಿದ ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರ ಅಗಲಿಕೆ ತುಂಬಲಾರದ ನಷ್ಟ ಎಂದರು.

ಹಿರಿಯ ಕಮ್ಯುನಿಸ್ಟ್ ಮುಖಂಡ ನರಸಿಂಹ ಬಾನ್ ಠಾಕೂರ್ ಮಾತನಾಡಿ ಯೆಚೂರಿಯವರು ಕಂಡ ಸಮಾಜವಾದಿ ಸಮಾಜದಕ್ಕಾಗಿ ಬಲಿಷ್ಠ ಕಮ್ಯುನಿಸ್ಟ್ ಚಳುವಳಿ ಕಟ್ಟಿ ಅವರ ಕನಸು ನನಸು ಮಾಡೋಣ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಸದಸ್ಯರಾದ ಅಮರೇಶ ಗುರಿಕಾರ, ಕೊಂಡಯ್ಯ, ನಿಂಗಪ್ಪ ಎಂ., ಹನೀಫ್, ಅಲ್ಲಾಭಕ್ಷ ಸಾಸಿಹಾಳ, ಚಂದ್ರಶೇಖರ್ ಅಂಬೇಡ್ಕರ್ ನಗರ, ರಾಜರತ್ನಂ, ಖಾಜಾ ಮೈನುದ್ದೀನ್, ರಿಯಾಜ್, ಹಾಜಿಬಾಬು, ನಾಗರಾಜ್, ವಿನೋದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here