ಕಲಬುರಗಿ: ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರ 42ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡುವ ರಾಜ್ಯಮಟ್ಟದ ಕುಮಾರಶ್ರೀ ಪ್ರಶಸ್ತಿಗೆ ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ರೇವಗ್ಗಿ ರಟಕಲ್ ನ ಮಾಲೀಕರಾದ ಶಿವರಾಜ್ ಪಾಟೀಲ್ ಗೊಣಗಿ ಮತ್ತು ಸಿದ್ದಲಿಂಗಯ್ಯ ಸ್ವಾಮಿ ಮಲ್ಕೊಡ, ಶಂಕರ್ ಜಿ ಹೂವಿನಹಿಪ್ಪರಗಿ ಚಿಂಚೋಳಿ ಮತ್ತು ಬಾಬು ಗೋಪಾನ ಬೆಣ್ಣೂರ್. ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಮಾಲೀಕ ಎಲ್ ಬಿ ಶೇಕ್ ಮಾಸ್ಟರ್ ಮತ್ತು ಸಂಚಾಲಕರಾದ ಶ್ರೀಧರ್ ಹೆಗಡೆ ತಿಳಿಸಿದ್ದಾರೆ.
ಇದೇ ಸೆಪ್ಟೆಂಬರ್ 27ರಂದು ಕಲಬುರಗಿಯ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ಬೆಳಗ್ಗೆ 10:30ಕ್ಕೆ ಹಾರಕುಡ್ ಶ್ರೀ ಡಾ. ಚನ್ನವೀರ ಶಿವಾಚಾರ್ಯ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಂಗಭೂಮಿ ಕ್ಷೇತ್ರದ ಮಾಲೀಕರಾಗಿ ಹತ್ತಾರು ವರ್ಷ ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಶಿವರಾಜ್ ಪಾಟೀಲ್ ಗೊಣಗಿ ಈ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ ರಂಗಭೂಮಿಯ ಕಲಾವಿದರುಗಳು ಮತ್ತು ಕಲಾ ಅಭಿಮಾನಿಗಳಾದ ಶ್ರೀರೇವಣಸಿದ್ದೇಶ್ವರ ನಾಟ್ಯ ಸಂಘದ ಕಲಾವಿದ ಮತ್ತು ಮಾಲೀಕ ರೈತ ಸೇನೆಯ ಕಾಳಗಿ ತಾಲ್ಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್, ರಾಜಶೇಖರ್ ಗುಡುದ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ.