ಕಲಬುರಗಿ: ಈ ಭಾಗದ ನೇಕಾರ ಸಮುದಾಯಕ್ಕೆ ಉದ್ಯೋಗದಲ್ಲಿ ಮೀಸಲಾತಿ ಪಡೆದು ಕೊಳ್ಳಲು ದಿ. ಎಲ್.ಜಿ.ಹಾವನೂರ ರ ತತ್ವದ ಮೇಲೆ ಹೋರಾಟ ಹಮ್ಮಿಕೊಂಡರೆ, ಕ್ರಿಯಾಶೀಲತೆಯಿಂದ ನ್ಯಾಯಯುತ ಹಕ್ಕು ಪಡೆದುಕೊಳ್ಳಲ್ಲು ಕಾನೂನಾತ್ಮಕವಾಗಿ ಹೋರಾಡುವ ಮನೋಭಾವ ಅಗತ್ಯ ಎಂದು ಪ್ರಾಧ್ಯಾಪಕ ಹೋರಾಟಗಾರ ಅನಾದಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ. ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಹಮ್ಮಿಕೊಂಡ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನ್ಯಾಯವಾದಿ ನಿತ್ಯಾನಂದ ಬಂಡಿ ಸನ್ಮಾನ ಸ್ವೀಕರಿಸಿ ಮಾತನಾಡಿ ನೇಕಾರರ ಅಸ್ತಿತ್ವ ಉಳಿಸಲು ಸಂಘಟಿಸುತ್ತಿರುವ ಸಂಸ್ಥೆಗೆ ಸದಸ್ಯನಾಗಿ ಸೇವೆ ಸಲ್ಲಿಸುವ ಕಾರ್ಯದಲ್ಲಿ ತೊಡಗಿಸಿ ಕೊಳ್ಳುಲು ಅವಕಾಶ ನೀಡಿದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ಸ್ವಾಗತಿಸಿದರು. ನಂತರ ಪ್ರಾಸ್ತಾವಿಕವಾಗಿ ಪ್ರಜಾಪ್ರಭುತ್ವ ಮತ್ತು ಎಲ್.ಜಿ.ಹಾವನೂರ ರವರ ಕುರಿತು ನ್ಯಾಯವಾದಿ ಜೆನವೇರಿ ವಿನೋದ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಮಾತನಾಡಿ, ಪ್ರಜಾಪ್ರಭುತ್ವ ಸಂವಿಧಾನ ಮತ್ತು ವಚನ ಸಾಹಿತ್ಯ ನೀಡುವಲ್ಲಿ ನಮ್ಮ ಸಮುದಾಯದ ಶ್ರಮವಿದೆ ಎಂದು ಹೆಮ್ಮೆಯಿಂದ ಹೇಳಲು ಈ ಸಂಸ್ಥೆ ಕಾರ್ಯನಿರತವಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷರದ ಶ್ರೀನಿವಾಸ ಬಲಪೂರ್ ವಂದಿಸಿದರು. ಸಭೆಯಲ್ಲಿ 30 ಜನ ನೇಕಾರ ಸಮುದಾಯದ ನ್ಯಾಯವಾದಿಗಳು ಉಪಸ್ಥಿತರಿದ್ದರು.