ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ನಿಜವಾದ ಶಿಲ್ಪಿಗಳು

0
32

ಶಹಾಬಾದ: ಈ ದೇಶದ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ನಿಜವಾದ ಶಿಲ್ಪಿಗಳು ಎಂದು ಕೂಡಲಸಂಗಮ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ನಾನಾಗೌಡ ಹಿಪ್ಪರಗಿ ಹೇಳಿದರು.

ಅವರು ನಗರದ ಪ್ರಜ್ಞಾ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರಜ್ಞಾ ನವೋದಯ ಕೋಚಿಂಗ್ ಕೇಂದ್ರದಲ್ಲಿ ಆಯೋಜಿಸಲಾದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಮಕ್ಕಳಲ್ಲಿ ಶ್ರದ್ಧೆ, ಸರಳತೆ,ಪ್ರೀತಿ ಬೆಳೆಸುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ಮಾಡುವವರೇ ಉತ್ತಮ ಶಿಕ್ಷಕ.ಒಂದು ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರು ನೀಡುವ ಶಿಕ್ಷಣ ಪ್ರಮುಖವಾಗಿರುತ್ತದೆ. ದೇಶದ ಸಮಗ್ರ ವಿಕಾಸದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಡಾ.ರಾಧಾಕೃಷ್ಣನ್ ಅವರು ಒಬ್ಬ ಶಿಕ್ಷಕರಾಗಿ ರಾಷ್ಟ್ರದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದು ಸಾಮನ್ಯ ವಿಷಯವಲ್ಲ.ಮಕ್ಕಳನ್ನು ಎತ್ತರ ಜ್ಞಾನವನ್ನು ನೀಡುವ ಮೂಲಕ ಶಿಕ್ಷಕರು ಡಾ.ರಾಧಾಕೃಷ್ಣನ್ ಅವರನ್ನು ನೆನೆಯಬೇಕೆಂದರು.

ಉಪನ್ಯಾಸಕ ಪ್ರವೀಣ ರಾಜನ್ ಮಾತನಾಡಿ, ಶಿಕ್ಷಕರು ತ್ಯಾಗಮಯ ಜೀವನ ನಡೆಸಿದಾಗ ಮಾತ್ರ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ.ಅಂಥಹ ಶ್ರೇಷ್ಠ ಗುಣಗಳನ್ನು ಡಾ.ರಾಧಾಕೃಷ್ಣನ್ ಅವರು ಶಿಕ್ಷಕರಲ್ಲಿ ಕಂಡಿದ್ದರು.ಅದಕ್ಕಾಗಿ ನನ್ನ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎನ್ನುವ ಮೂಲಕ ಶಿಕ್ಷಕ ವೃತ್ತಿಗೆ ಬಹು ದೊಡ್ಡ ಗೌರವ ತಂದು ಕೊಟ್ಟರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರುಮಾತೆ ಸುರೇಖಾ ಮೇತ್ರಿ ಮಾತನಾಡಿ,ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಮಾರ್ಗದರ್ಶನ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿ ಮಗು ತನ್ನ ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಹಿಂದೆ ಶಿಕ್ಷಕರ ಪಾತ್ರ ಪ್ರಭಾವ ಬೀರುತ್ತದೆ. ಪ್ರತಿ ಮಗುವಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದರ ಮೂಲಕ ದೂರದೃಷ್ಟಿಯಿಂದ ಕೂಡಿದ ಸೃಜನಾತ್ಮಕತೆ ಮತ್ತು ಸದಾ ಕ್ರಿಯಾಶೀಲತೆ ಅಳವಡಿಸಿಕೊಳ್ಳಲು ಪ್ರೇರೇಪಿಸುವಂತೆ ಶಿಕ್ಷಕರಾದ ನಾವು ಪ್ರಯತ್ನಿಸಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಭದಲಿ ಅತಿಥಿಗಳಾಗಿ ಗೀತಾ, ಶಾಂತಬಾಯಿ.ಎಸ್ ವೇದಿಕೆಯ ಮೇಲಿದ್ದರು.ಪಿ.ಎಸ್.ಮೇತ್ರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here