ಸುರಪುರ: ಇಂದು ವಧುವರರ ಸಮರ್ಪಕ ಮಾಹಿತಿ ಸಿಗದೆ ಮದುವೆಗಳು ಸರಿಯಾದ ವಯಸ್ಸಿಗೆ ನಡೆಯುತ್ತಿಲ್ಲ. ಎಷ್ಟೊ ಜನರಿಗೆ ೪೦ ವರ್ಷ ದಾಟಿದರೂ ಮದುವೆಯಾಗಿರುವುದಿಲ್ಲ. ಇದನ್ನು ಮನಗಂಡು ವಧುವರರ ಮಾಹಿತಿ ಕೇಂದ್ರ ಆರಂಭಿಸಲಾಗಿದೆ’ ಎಂದು ಮಾಹಿತಿ ಕೇಂದ್ರದ ಗೌರವಾಧ್ಯಕ್ಷ ರಂಗಪ್ಪನಾಯಕ ಪ್ಯಾಪ್ಲಿ ಹೇಳಿದರು.
ನಗರದ ವೇಣುಗೋಪಾಲಸ್ವಾಮಿ ರಸ್ತೆಯ ನಗರಸಭೆ ಕಾಂಪ್ಲೆಕ್ಸ್ ಮಳಿಗೆ ಸಂಖ್ಯೆ ೫ ರಲ್ಲಿ ಸೋಮವಾರ ವಧುವರರ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ತಮ್ಮ ಮಕ್ಕಳ ಮದುವೆಯಾಗದೆ ಇಂದು ತಂದೆ ತಾಯಿ ಮರುಗುವಂತಾಗಿದೆ. ವಧು ಮತ್ತು ವರರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗದಿರುವುದೆ ಇದಕ್ಕೆ ಮುಖ್ಯ ಕಾರಣವಾಗಿದೆ. ನಮ್ಮ ಕೇಂದ್ರದಲ್ಲಿ ಸದಸ್ಯತ್ವ ಪಡೆದರೆ ವಧುವರರ ವಿವರವಾದ ಮಾಹಿತಿ ಪಡೆಯಬಹುದಾಗಿದೆ.ಸಮಾಜ ಸೇವೆಯ ಉದ್ದೇಶ ಇಟ್ಟುಕೊಂಡು ಈ ಮಾಹಿತಿ ಕೇಂದ್ರ ಆರಂಭಿಸಲಾಗಿದೆ. ಯಾವುದೇ ಲಾಭದ ವಿಚಾರ ಇಲ್ಲ. ಎಲ್ಲ ಜಾತಿ ಜನಾಂಗಕ್ಕೆ ಈ ಕೇಂದ್ರದ ಸೇವೆ ಲಭ್ಯವಿರುತ್ತದೆ ಎಂದರು.
ಅಧ್ಯಕ್ಷ ರಾಧೆಶಾಮ ಭಂಗ್ ಮಾತನಾಡಿ,ನಮ್ಮ ಕೇಂದ್ರದ ಸದಸ್ಯತ್ವ ಪಡೆಯಲು ೨ ಭಾವಚಿತ್ರ, ಜಾತಕ, ಬಯೋಡೆಟಾ, ವಿಳಾಸ ಒದಗಿಸಬೇಕು. ಪ್ರತಿ ತಿಂಗಳು ಎರಡನೆ ಮತ್ತು ೪ನೆ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಮಾತ್ರ ಸೇವೆ ಒದಗಿಸಲಾಗುವುದು ಎಂದರು.
ಹೆಚ್ಚಿನ ಮಾಹಿತಿಗೆ ಮೋಬೈಲ್ ಸಂಖ್ಯೆ: ೯೪೮೨೪೫೫೦೫೦, ೯೭೪೧೬೦೫೮೬೨, ೮೮೬೭೯೯೦೨೫೭ ಸಂಪರ್ಕಿಸಬಹುದು. ಈ ಕೇಂದ್ರದ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯದರ್ಶಿ ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ, ಕೊಟ್ರೇಶ ಹಿರೇಮಠ, ಅಬ್ದುಲ ಖಾದರ ಸೌದಾಗರ, ತೇಜಕಾಂತ ದೇವರಶೆಟ್ಟಿ, ಸೈಯದ್ ಇಕ್ಬಾಲ್ ಅಹ್ಮದ್, ಸಂಗಣ್ಣ ಮಿಣಜಗಿ, ಈಶ್ವರ ಮಾಳಗಿ ಇತರರು ಇದ್ದರು.