ಜನನಿ ಮಹಾವಿದ್ಯಾಲಯದಿಂದ ತಿಂಥಣಿಯಲ್ಲಿ ಸ್ವಚ್ಛ ಭಾರತ ವಿಶೇಷ ಶಿಬಿರ

0
58

ಸುರಪುರ: ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ತಿಂಥಣಿ ಗ್ರಾಮದಲ್ಲಿ ಏರ್ಪಡಿಸಿರುವ ರಾಷ್ಟ್ರೀಯಸೇವಾ ಯೋಜನೆ ಸ್ವಚ್ಛ ಭಾರತ ವಿಶೇಷ ಶಿಬಿರದಲ್ಲಿ ಸುರಪುರದ ಅಗ್ನಿಶಾಮಕ ಠಾಣೆಯ ಸಹಯೋಗದಲ್ಲಿ ತುರ್ತು ಪರಿಸ್ಥಿತಿಯ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಯಾದಗಿರಿ ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿಗಳಾದ ಪ್ರವೀಣ ಎಂ.ಕೆ ಯವರು ವಿದ್ಯಾರ್ಥಿಗಳಿಗೆ ತುರ್ತುಪರಿಸ್ಥಿತಿಯಲ್ಲಿ ಯಾವರೀತಿಯ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕೆಂಬುದನ್ನು ತಿಳಿಸಿದರು ಮತ್ತು ಅಗ್ನಿಯನ್ನು ಹೇಗೆ ನಂದಿಸಬೇಕೆಂದು ಅಣುಕು ಪ್ರದರ್ಶನವನ್ನು ತೋರಿಸುವ ಮೂಲಕ ವಿದ್ಯಾರ್ಥಿನಿಯರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

Contact Your\'s Advertisement; 9902492681

ಮೇದಿಕೆಯ ಮೇಲೆ ಸುರಪುರ ಅಗ್ನಿಶಾಮಕ ಠಾಣಿಯ ಅಧಿಕಾರಿಗಳಾದ ಶರ್ಮುದ್ದಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪನ್ಯಾಸಕ ಅಂಬ್ರೇಶ ಚಿಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಅಧಿಕಾರಿ ಡಾ.ಮಲ್ಲಿಕಾರ್ಜುನ ಕಮತಗಿ,ಸಂಸ್ಥೆಯ ಕಾರ್ಯದರ್ಶಿ ಆದಿಶೇಷ ನೀಲಗಾರ, ವೆಂಕಟೇಶ ಜಾಲಗಾರ,ಶ್ರೀಮತಿ ಸುವರ್ಣ ಅಂಟೋಳಿ, ಮರೆಮ್ಮ ಕಟ್ಟಿಮನಿ, ಬಸವರಾಜೇಶ್ವರಿ, ಬೀರೇಶ,ಮಹೇಶ ಗಂಜಿ, ಶ್ರೀದೇವಿ ನಾಯಕ ಮುಂತಾದವರು ಉಪಸ್ಥಿತರಿದ್ದರು.ಕರಿಸ್ಮಾ ಸರ್ಮುದ್ದಿನ್ ನಿರೂಪಿಸಿದರು, ಸಹನಾ ಅಸಗಳ್ಳಿ ಸ್ವಾಗತಿಸಿದರು, ಈಶ್ವರಿ ಈರೇಶ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here